ಕರೀನಾ ಕಪೂರ್ ರವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಾಲಿವುಡ್ ನಟಿ ರವೀನಾ ಟಂಡನ್, ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಮಾಧ್ಯಮಗಳು ಮಹಿಳೆಯರನ್ನು ಮಾತ್ರ ಯಾಕೆ ಪ್ರಶ್ನಿಸುತ್ತಿವೆ ಎಂದು ಕೇಳಿದ್ದಾರೆ. ಹೀರೋಸ್ ಕೂಡ ಇದನ್ನು ಮಾಡುತ್ತಾರೆ, ಮಹಿಳೆಯರ ಮೇಲೆ ಮಾತ್ರ ಬೊಟ್ಟು ಮಾಡುತ್ತೀರಿ ಎಂದು ಪ್ಲಾಸ್ಟಿಕ್ ಸರ್ಜರಿ ಕುರಿತು ರವೀನಾ ಹೇಳಿದರು.

ಕರೀನಾ ಕಪೂರ್ ಅವರ ವಾಟ್ ವುಮೆನ್ ವಾಂಟ್ ಎಂಬ ರೇಡಿಯೋ ಕಾರ್ಯಕ್ರಮದಲ್ಲಿ ನಟಿ ರವೀನಾ ಟಂಡನ್ ಅವರು ಪ್ಲಾಸ್ಟಿಕ್ ಸರ್ಜರಿಗಾಗಿ ಮಾಧ್ಯಮಗಳು ಮಹಿಳೆಯರನ್ನು ಮಾತ್ರ ಪ್ರಶ್ನಿಸುತ್ತಿವೆ. ಹಾಗಾದರೆ ಇವರ ಆಲೋಚನೆಯೇನು, ಹೀರೋಗಳು ಪ್ಲಾಸ್ಟಿಕ್ ಸರ್ಜರಿ ಮಾಡುವುದಿಲ್ಲವೆಂದೇ?, ಮಾತ್ರವಲ್ಲ ಬಾಲಿವುಡ್ ನಲ್ಲಿ ಪ್ರಮುಖ ಹೀರೋಗಳು ಎಷ್ಟೋ ವಯಸ್ಸಾದರೂ ಯುವಕರ ಪಾತ್ರವಲ್ಲ ಮಾಡುತ್ತಾ ಇದ್ದಾರೆ, ಅವರೇನು ವಿಶೇಷ ಡ್ರಿಂಕ್ಸ್ ಏನಾದರೂ ಕುಡಿಯುತ್ತಾರೆಯೇ? ಆದರೆ, ಅಮೀರ್, ಸಲ್ಮಾನ್ ಮತ್ತು ಅನಿಲ್ ಕಪೂರ್ ಅವರಂತಹ ನಟರು ತಮ್ಮ ವಯಸ್ಸಿಗೆ ಹತ್ತಿರವಾದ ಪಾತ್ರಗಳನ್ನು ಮಾಡುತ್ತಿರುವುದರಿಂದ ಈಗ ಪ್ರವೃತ್ತಿ ಬದಲಾಗುತ್ತಿದೆ. ನನಗೆ ಉದ್ಯಮದ ಬಗ್ಗೆ ಭರವಸೆ ಇದೆ” ಎಂದು ಅವರು ಹೇಳಿದರು.

ಸದ್ಯಕ್ಕೆ ರವೀನಾ ಕನ್ನಡ ಚಿತ್ರ ಕೆಜಿಎಫ್:  ಭಾಗ 2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಅವರು ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here