ಕೌನ್ ಬನೇಗಾ ಕರೋಡ್ಪತಿ ಕೆಬಿಸಿ 12 ತನ್ನ ಹೊಸ ಸೀಸನ್ ನೊಂದಿಗೆ ಬರುತ್ತಿದೆ. ಈ ತಿಂಗಳ ಆರಂಭದಲ್ಲಿ ನೋಂದಣಿ ಪ್ರಾರಂಭವಾಗಿದ್ದು, ಅಮಿತಾಬ್ ಬಚ್ಚನ್ ಹಾಟ್ ಸೀಟ್ ನಲ್ಲಿ ಮತ್ತೆ ವಿರಾಜಮಾನರಾಗಲಿದ್ದಾರೆ.

ರಾಷ್ಟ್ರವ್ಯಾಪಿ ಕರೋನವೈರಸ್ ಪ್ರೇರಿತ ಲಾಕ್‌ಡೌನ್ ಕಾರಣದಿಂದಾಗಿ ಅಮಿತಾಬ್ ತಮ್ಮ ಮನೆಯಲ್ಲಿ ನೋಂದಣಿಗಳನ್ನು ಪ್ರಕಟಿಸುವ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ತನ್ನ ಅನುಭವ ಹಂಚಿಕೆ ಮತ್ತು ಸಾಮಾಜಿಕ ಎಚ್ಚರಿಕೆಯ ಸಂದೇಶವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.

2001 ರಲ್ಲಿ ಮಕ್ಕಳಿಗಾಗಿ ವಿಶೇಷ ಕೆಬಿಸಿ ಜೂನಿಯರ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ 14 ವರ್ಷದ ರವಿ ಮೋಹನ್ ಸೈನಿ ಎಲ್ಲಾ 15 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ 1 ಕೋಟಿ ರೂ. ಗೆದ್ದಿದ್ದರು. ಈಗ ಅದೇ ಬಾಲಕ ಸುಮಾರು ಎರಡು ದಶಕಗಳ ಬಳಿಕ ಐಪಿಎಸ್ ಅಧಿಕಾರಿಯಾಗಿದ್ದಾರೆ ಎಂಬುದು ವಿಶೇಷ.

ಸೈನಿ (ಈಗ 33 ವರ್ಷ) ಪೊರ್ಬಂದರ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು. ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡುತ್ತಾ, “ನನ್ನ ಶಾಲಾ ಶಿಕ್ಷಣದ ನಂತರ ಜೈಪುರದ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮಾಡಿದೆ. ನಾನು ಯುಪಿಎಸ್ಸಿಯನ್ನು ಪಾಸ್ ಮಾಡಿದಾಗ ಎಂಬಿಬಿಎಸ್ ನಂತರ ನನ್ನ ಇಂಟರ್ನ್ಶಿಪ್ ಮಾಡುತ್ತಿದ್ದೆ. ನನ್ನ ತಂದೆ ನೌಕಾಪಡೆಯಲ್ಲಿದ್ದರು ಮತ್ತು ಅವರ ಪ್ರೇರಣೆಯಿಂದ ನಾನು ಪೊಲೀಸ್ ಪಡೆಗೆ ಸೇರಿಕೊಂಡೆ” ಎಂದು ಹೇಳಿದ್ದಾರೆ.

ಸೈನಿ 2014 ರಲ್ಲಿ 461 ಶ್ರೇಣಿಯೊಂದಿಗೆ ಭಾರತೀಯ ಪೊಲೀಸ್ ಸೇವೆಗಳಿಗೆ ಅರ್ಹತೆ ಪಡೆದರು. “ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಪೋರ್ಬಂದರ್‌ನಲ್ಲಿ ಲಾಕ್‌ಡೌನ್ ಅನುಷ್ಠಾನ ಮಾಡುವುದು ನನ್ನ ಪಾತ್ರ. ಅಲ್ಲದೆ, ಕಾನೂನು ಮತ್ತು ಸುವ್ಯವಸ್ಥೆ ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದರು.

LEAVE A REPLY

Please enter your comment!
Please enter your name here