ಕೊಲೊಂಬೊ : ಭಾರತದ ಗುಪ್ತಚರ ಸಂಘಟನೆಯಾದ ರಿಸರ್ಚ್ ಆಂಡ್ ಅನಾಲಿಸೀಸ್ ವಿಂಗ್(ರಾ) ನನ್ನನ್ನು ಕೊಲ್ಲಲು ಯೋಜನೆ ಹಾಕಿಕೊಂಡಿರುವುದಾಗಿ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆಯವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಬಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಶ್ರೀಲಂಕಾದ ಜೊತೆಗಿನ ಮೈತ್ರಿಯಲ್ಲಿ ಯಾವುದೇ ಬಿರುಕಿಲ್ಲ ಈ ಬಗ್ಗೆ ಆತಂಕಪಡುವಂತಹದ್ದೇನೂ ಇಲ್ಲ. ಎರಡೂ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವಿದೆ. ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಗೆ ಕೆಲವೇ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದೂ ಅವರು ಹೇಳಿದರು.

ರಾ ತನ್ನನ್ನು ಕೊಲ್ಲಲು ಯೋಜನೆ ಹಾಕಿಕೊಂಡಿದೆ, ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ತಿಳಿದಿರಬೇಕೆಂದಿಲ್ಲ. ಎಂದು ಮಂತ್ರಿಮಂಡಲದ ಸಭೆಯಲ್ಲಿ ಮೈತ್ರಿಪಾಲ ಹೇಳಿರುವುದಾಗಿ ವದಂತಿ ಹರಡಿತ್ತು. ಶ್ರೀಲಂಕಾ ಸರಕಾರ ಇದನ್ನು ತಳ್ಳಿಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply