ನವದೆಹಲಿ: ಸಾರ್ವಜನಿಕ ಕ್ಷೇತ್ರದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡಿದೆ. ಇದರಿಂದ ಗೃಹ ಮತ್ತು ವಾಹನ ಸಾಲ ಮತ್ತಷ್ಟು ಅಗ್ಗವಾಗಲಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್ ಸತತ 6ನೇ ಬಾರಿಗೆ ಬಡಿ ದರಗಳನ್ನು ಪರಿಷ್ಕರಿಸಿದ್ದು ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಇತ್ತೀಚೆಗೆ 10 ವರ್ಷಗಳಷ್ಟು ಕೆಳಮಟ್ಟವಾದ ಶೇ.5.15ಕ್ಕೆ ಇಳಿಸಿದ್ದರ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.

ಅಕ್ಟೋಬರ್ 10ರಿಂದ ಜಾರಿಗೆ ಬರುವಂತೆ ರೆಪ್ಕೋ ದರಕ್ಕೆ ಜೋಡಣೆಯಾಗಿರುವ ಚಿಲ್ಲರೆ ಸಾಲಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಾಲಗಳ ಬಡ್ಡಿ ದರವನ್ನು ಶೇ.8.15ರಿಂದ ಶೇ.8.05ಕ್ಕೆ ಇಳಿಸಲಾಗಿದೆ. ಅಂತೆಯೇ ಉಳಿತಾಯ ಖಾತೆಯ 1 ಲಕ್ಷ ರೂವರೆಗಿನ ಮೊತ್ತದ ಬಡ್ಡಿದರವನ್ನು ಶೇ.3.5 ರಿಂದ ಶೇ.3.25ಕ್ಕೆ ಇಳಿಸಲಾಗಿದ್ದು ಪರಿಷ್ಕೃತ ದರ ನವಂಬರ್ 1ರಿಂದ ಜಾರಿಯಾಗಲಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಗೃಹ ಮತ್ತು ವಾಹನ ಸಾಲಗಳನ್ನು ಅಕ್ಟೋಬರ್ 1ರಿಂದಲೇ ಅನ್ವಯವಗುವಂತೆ ರೆಮೋ ದರದೊಂದಿಗೆ ಬ್ಯಾಂಕ್ ಜೋಡಣೆ ಮಾಡಿದೆ. ಅಲ್ಲದೆ ಗೃಹ ಸಾಲಕ್ಕೆ ಜುಲೈನಿಂದಲೇ ಚಲನಾತ್ಮಕ ಬಡ್ಡಿ ದರದೊಂದಿಗೆ ಜೋಡಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here