photo : malayalam.samayam.com

ಶಬರಿಮಲೆ ದರ್ಶನಕ್ಕೆ ತೆರಳಿದ ರೆಹನಾ ಫಾತಿಮಾ ವಿರುದ್ಧ ಬಿಎಸ್.ಎನ್.ಎಲ್. ಕಂಪೆನಿ ಕ್ರಮ ಕೈಗೊಂಡಿದೆ. ಇದರ ಪ್ರಥಮ ಹಂತವಾಗಿ ಬೇರೆ ಸ್ಥಳಕ್ಕೆ ವರ್ಗಾಯಿಸಲಾಗಿದೆ. ಕೊಚ್ಚಿಯ ಬೋಟ್ ಜೆಟ್ಟಿ ಶಾಖೆಯ ರವಿಪುರಮ್ ಬ್ರಾಂಚ್ ಗೆ ವರ್ಗಾಯಿಸಲಾಗಿದೆ.

ಎರ್ನಾಕುಳಂನ ಆಕ್ಟಿವಿಸ್ಟ್ ಮತ್ತು ನಟಿ ರಹ್ನಾ ಫಾತಿಮಾ, ಆಂಧ್ರ ಪ್ರದೇಶದ ಟಿವಿ ಚ್ಯಾನೆಲೊಂದರ ವರದಿಗಾರ್ತಿ ಕವಿತಾರನ್ನು ಅಯ್ಯಪ್ಪ ಭಕ್ತರು ಸನ್ನಿಧಾನಕ್ಕೆ ತೆರಳದಂತೆ ತಡೆದಿದ್ದರು. ನಂತರ ಪೊಲೀಸ್ ರಕ್ಷಣೆಯಲ್ಲಿ ಅವರನ್ನು ಮರಳಿ ಕಳುಹಿಸಲಾಗಿತ್ತು.

ಆಂತರಿಕವಾದ ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಎಸ್.ಎನ್.ಎಲ್. ನಿರ್ಧರಿಸಿದೆ. ಟೆಲಿಫೋನ್ ಮೆಕ್ಯಾನಿಕ್ ಉದ್ಯೋಗ ನಿರ್ವಹಿಸುತ್ತಿರುವ ಈಕೆಯನ್ನು ಜನರ ನೇರ ಸಂಪರ್ಕವಿಲ್ಲದ ಬ್ರಾಂಚ್ ಗೆ ಸ್ಥಳಾಂತರಿಸಲಾಗಿದೆ.

Leave a Reply