ನ್ಯೂಝಿಲೆಂಡ್: ಮಹಿಳೆಯರು ತಮ್ಮ ಕೆರಿಯರ್ ಬಗ್ಗೆ ಬಹಳ ಉತ್ಸಾಹಿಗಳಾಗಿರುತ್ತಾರೆ. ನ್ಯೂಝಿಲೆಂಡ್‍ನ ಪ್ರಧಾನಿ ಜೆಸಿಂಡಾ ಎರ್ಡನ ಮೂರು ವರ್ಷದ ಮಗುವಿನೊಂದಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು. ನ್ಯೂಝಿಲೆಂಡ್‍ನಲ್ಲಿ ನ್ಯೂಸ್ ಆ್ಯಂಕರ್ ಒಬ್ಬರು ಎರಡು ವರ್ಷದ ಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ಹವಮಾನ ವರದಿ ಓದಿದ್ದಾರೆ.

ಅಂತಾರಾಷ್ಟ್ರೀಯ ಮಕ್ಕಳ ವಾರ ಈ ವರ್ಷ ಅಕ್ಟೋಬರ್ ಒಂದರಿಂದ ಏಳರವರೆಗೆ ಆಚರಿಸಲಾಗಿತ್ತು.ಈ ಸಂದರ್ಭದಲ್ಲಿ ಆ್ಯಂಕರ್ ಇಂಥ ಹೆಜ್ಜೆ ಇರಿಸಿದ್ದಾರೆ.
ಈ ರೀತಿ ಅವರು ಜಗತ್ತಿಗೆ ಬಹಳ ಉತ್ತ ಮ ಸಂದೇಶವನ್ನು ನೀಡಿದ್ದಾರೆ. ಆ್ಯಂಕರ್ ಕಾರ್ಯವನ್ನು ಬಹಳಷ್ಟು ಮಂದಿ ಶ್ಲಾಘಿಸಿದರು. ನ್ಯೂಸ್ ಕಂಪೆನಿ ಈ ವೀಡಿಯೊವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿತ್ತು. ಇಂಟರ್‍ನ್ಯಾಶನಲ್ ಬೇಬಿ ವೇರಿಂಗ್ ವೀಕ್ ನಡೆಯುತ್ತಿದೆ. ಆದ್ದರಿಂದ ನಾನು ಯಾಕೆ ತನ್ನ ಮಗುವನ್ನು ತರಬಾರದು ಎಂದು ಯೋಚಿಸದೆ ಎಂದು ಆ್ಯಂಕರ್ ಹೇಳಿಕೊಂಡಿದ್ದಾರೆ.

ವೀಡಿಯೊದಲ್ಲಿ ಮಾರ್ಟಿನ್ ಹವಾಮಾನ ವರದಿ ವಾಚಿಸುತ್ತಿದ್ದರು. ಅವರ ಬೆನ್ನಲ್ಲಿದ್ದ ಮಗು ನಿದ್ರಿಸುತ್ತಿತ್ತು. ಮಗುವಿಗೆ ಏನು ನಡೆಯುತ್ತಿದೆ ಎಂದು ಗೊತ್ತೇ ಇರಲಿಲ್ಲ. ಮಗುವಿನೊಂದಿಗೆ ವರದಿ ವಾಚಿಸಲು ಅವಕಾಶ ಮಾಡಿಕೊಟ್ಟ ಕಂಪೆನಿಯ ಅಧಿಕಾರಿಗಳಿಗೆ ಮಾರ್ಟಿನ್ ಕೃತಜ್ಞತೆ ಸೂಚಿಸಿದ್ದಾರೆ.

Leave a Reply