ಮಗ ಪ್ರೇಯಸಿಯೊಂದಿಗೆ ಓಡಿ ಹೋದ ಹಿನ್ನೆಲೆಯಲ್ಲಿ ಆತನ ತಾಯಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಪಾಶವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಘಟನೆ ಶಾಂಲಿ ಜಿಲ್ಲೆಯ ನೋಜಲ್ ಹಳ್ಳಿಯಲ್ಲಿ ನಡೆದಿದ್ದು, ಶುಕ್ರವಾರ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿದೆ ಎಂದುಪೊಲೀಸ್ ಅಧೀಕ್ಷಕ ಅಜಯ್ ಪಾಲ್ ಶರ್ಮಾ ಅವರು ಮುಝಫ್ಫರ್ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಘಟನೆಯ ವಿವರ:

ಪೊಲೀಸರ ಪ್ರಕಾರ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ತಾಯಿಯ ಮಗ, ಗಾಜಿಯಾಬಾದ್ನ ಭೂಪುರಾ ಗ್ರಾಮದ ನಿವಾಸಿಯಾಗಿದ್ದು, ನವೆಂಬರ್ 20 ರಂದು 24 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದು ಅವರಿಬ್ಬರೂ ಓಡಿ ಹೋಗಿದ್ದರು.

ಪ್ರತೀಕಾರವಾಗಿ, ಆಕೆಯ ಕುಟುಂಬದ ಸದಸ್ಯರು ಆತನ ಸಹೋದರ, ತಾಯಿ, ತಂದೆ ಮತ್ತು ಅವರ ಸೋದರ ಸಂಬಂಧಿಯನ್ನು ಡಿಸೆಂಬರ್ 19 ರಂದು ಅಪಹರಿಸಿ ಶಾಮ್ಲಿ ಜಿಲ್ಲೆಯ ಮನೆಯಲ್ಲಿ ಅವರನ್ನು ಕೂಡಿ ಹಾಕಿದ್ದರು. ನಂತರ ಅವರಿಗೆ ಬೆದರಿಕೆ ಹಾಕಿ, 40 ವರ್ಷ ಪ್ರಾಯದ ತಾಯಿಯನ್ನು ಸಾಮೂಹಿಕ ರೇಪ್ ಮಾಡಿದರು ಎನ್ನಲಾಗಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮಾಡಿ ಅವರನ್ನು ರಕ್ಷಿಸಿದ್ದಾರೆ.

Leave a Reply