ರಿಷಿ ಕಪೂರ್‌ (4 ಸೆಪ್ಟಂಬರ್ 1952- 30 ಏಪ್ರಿಲ್ 2020) ಅವರು ಭಾರತದ ಬಾಲಿವುಡ್ನಟ, ಚಿತ್ರ ತಯಾರಕ ಮತ್ತು ನಿರ್ದೇಶಕರು. ಮುಂಬಯಿನಲ್ಲಿ ಜನನ, ಕಪೂರ್‌ರವರು ಪ್ರಸಿದ್ಧ ಸಿನಿಮಾ ನಿರ್ದೇಶಕ ಮತ್ತು ನಟ ರಾಜ್ ಕಪೂರ್ ರವರ ಎರಡನೆಯ ಮಗ

ಇವರ ಸಹೋದರರು ಸುಪರಿಚಿತ ನಟರು: ರಣಧೀರ್ ಕಪೂರ್ ಮತ್ತು ರಾಜೀವ್ ಕಪೂರ್. ರಣ್‌ಬೀರ್ ಕಪೂರ್ ರವರು ನಟನಾ ಪಿತೃರಾಗಿದ್ದರು. ರಿಷಿ ಅವರು ಇಂದಿನ ನಟಿಯರಾದ ಕರಿಶ್ಮಾ ಕಪೂರ್ ಮತ್ತು ಕರೀನಾ ಕಪೂರ್ ರವರ ಚಿಕ್ಕಪ್ಪ. ಇವರು ಪಂಜಾಬಿ ಹಿಂದೂ ಖಾತ್ರಿ ವಂಶದವರು.

ವೃತ್ತಿಜೀವನ
ರಿಷಿ ಕಪೂರ್ ಮೊದಲನೆಯ ರಂಗಪ್ರವೇಶ ಅವರ ತಂದೆಯ 1970 ರಲ್ಲಿನ ಸಿನಿಮಾ ಮೇರಾ ನಾಮ್ ಜೋಕರ್, ಅವರ ತಂದೆಯ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ರಿಷಿ ಕಪೂರ್ ರವರು ನಟಿಸಿದ ಮೊದಲ ಚಿತ್ರ ಡಿಂಪಲ್ ಕಪಾಡಿಯರವರ ಜೊತೆಗೆ 1973 ರಲ್ಲಿ ತಯಾರಾದ ಪ್ರಸಿದ್ಧ ಸಿನಿಮಾ ಬಾಬಿ ಇದು ಅತ್ಯಲ್ಪಕಾಲದಲ್ಲಿಯೇ ಯುವಕರ ಜನಮನ್ನಣೆಗಳಿಸಿತು. ಅವರು ಅಲ್ಲಿಂದ ಸುಮಾರು ನೂರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ಹಮ್ ತುಮ್ (2004) ಮತ್ತು ಫನ್ನಾ (2006)ದಲ್ಲಿ ಪೋಷಕ ಪಾತ್ರದೊಂದಿಗೆ ನಟಿಸಿದ್ದಾರೆ. ಅವರು 1998 ರಲ್ಲಿ ತಾರೆಯರಾದ ರಾಜೇಶ್ ಖನ್ನಾ, ಐಶ್ವರ್ಯಾ ರೈ, ಅಕ್ಷಯ್ ಖನ್ನಾ, ಖಾದರ್ ಖಾನ್, ಪರೇಶ್ ರಾವಲ್ ಮತ್ತು ಜಸ್ಪಾಲ್ ಭಟ್ಟಿ ಅವರು ನಟಿಸಿರುವ ಆ ಅಬ್ ಲೌಟ್ ಚಲೇ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಅವರು ನಮಸ್ತೆ ಲಂಡನ್ ಮತ್ತು ಅವರ ಸಹೋದರ ಆದಿತ್ಯ ರಾಜ್ ಕಪೂರ್(ರಿಷಿಯವರ ಚಿಕ್ಕಪ್ಪ ಶಮಿ ಕಪೂರ್‌ರವರ ಮಗ) ನಿರ್ದೇಶಿಸಿದ ಇಂಗ್ಲೀಷ್ -ಭಾಷೆಯ ಸಿನಿಮಾ ಡೋನ್ಟ್ ಸ್ಟಾಪ್ ಡ್ರೀಮಿಂಗ್‌‌ ನಲ್ಲಿ ನಟಿಸಿದ್ದಾರೆ. ಇವರು ಒಳ್ಳೆಯ ಅನುಭವಿ ನಟ ಕಮಲಹಾಸನ್ ಜೊತೆ ಸಾಗರ್ ಸಿನಿಮಾದಲ್ಲಿ ನಟಿಸಿದ್ದಾರೆ ಇದು ಅಧಿಕೃತವಾಗಿ ಆಸ್ಕಾರ್‌ಗೆ ಕಳುಹಿಸಲಾಗಿತ್ತು.

ರಿಷಿ ಅವರು ‘ಚಿಂಟು ಜಿ’ ಸಿನಿಮಾದಲ್ಲಿ ಸ್ವತಃ ಅವರೇ ನಟಿಸಿದ್ದಾರೆ. ಅವರ ತಂದೆ ರಾಜ್ ಕಪೂರ್, ಅವರ ತಾಯಿ, ಅವರ ಪತ್ನಿ ಮತ್ತು ಅವರ ಹಿಂದಿನ ಚಿತ್ರಗಳಾದ ಚಾಂದನಿ, ಮೇರಾ ನಾಮ್ ಜೋಕರ್ ಮತ್ತು ಇತರೆಯನ್ನು ಉಲ್ಲೇಖ ಹೊಂದಿರುವುದರನ್ನು ಚಿತ್ರ ಒಳಗೊಂಡಿದೆ.

ವೈಯಕ್ತಿಕ ಜೀವನ
ರಿಷಿ ಕಪೂರ್ ನೀತೂ ಸಿಂಗ್‌,ರವರೊಂದಿಗೆ 13 ಏಪ್ರಿಲ್ 1979 ರಲ್ಲಿ ನಿಶ್ಚಿತಾರ್ಥವಾದ ಮೇಲೆ ಅವರೊಂದಿಗೆ ಹಲವಾರು ಪ್ರಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದಾರೆ ನಂತರ 1980 ರಲ್ಲಿ ಅವರೊಂದಿಗೆ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು ರಣಬೀರ್ ಕಪೂರ್, ಅವರು ಕೂಡಾ ನಟ, ಮತ್ತು ರಿಧಿಮಾ ಕಪೂರ್.

 ಪ್ರಶಸ್ತಿಗಳು
1970 – ಮೇರಾ ನಾಮ್ ಜೋಕಾರ್‌ ಗಾಗಿ ಬಿಎಫ್‌ಜೆಎ ವಿಶೇಷ ಪ್ರಶಸ್ತಿ
ಮೇರಾ ನಾಮ್ ಜೋಕಾರ್ ಸಿನಿಮಾದಲ್ಲಿ ಉತ್ತಮ ಬಾಲ ನಟನಾಗಿ 1971- ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಲಭಿಸಿತು.
1973 -ರಲ್ಲಿ ಬಾಬಿ ಸಿನಿಮಾಗಾಗಿ ಫಿಲ್ಮ್ ಫೇರ್‌ನ ಉತ್ತಮ ನಟ ಪ್ರಶಸ್ತಿ ಲಭಿಸಿತು
2006 – ಜೀವಮಾನದ ಸಾಧನೆಗಾಗಿ ಝೀ ಸಿನಿ ಪ್ರಶಸ್ತಿ
2007 – ಎಂಟಿವಿ ಲೈಕ್ರಾ ಪ್ರಶಸ್ತಿಗಳು: 2006 ರ ಮಹಾ ಸ್ಟೈಲ್ ಐಕಾನ್
2008 – ಫಿಲಂಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್
2008 – ಎಫ್‌ಐಸಿಸಿಐ “ಲಿವಿಂಗ್ ಲೆಜೆಂಡ್ ಇನ್ ಎಂಟರ್‌ಟೈನ್‌ಮೆಂಟ್” ಪ್ರಶಸ್ತಿ
2008 – 10 ನೆಯ ಮುಂಬಯಿ‌ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ ಇಂಟರ್‌ನ್ಯಾಷನಲ್ ಫಿಲ್ಮ್‌ (ಎಂ.ಎ.ಎಂ.ಐ) ಜೀವನಾವಧಿ ಸಾಧನೆಯ ಪ್ರಶಸ್ತಿ ಲಭಿಸಿತು
2009- ಸಿನಿಮಾದ ನೆರವಿಕೆಗಾಗಿ ರಷ್ಯಾ ಸರ್ಕಾರದಿಂದ ಮನ್ನಣೆ ಸಿಕ್ಕಿತು
2010 -ಅಪ್ಸರಾ ಪ್ರಶಸ್ತಿಗಳು: ಲವ್ ಆಜ್ ಕಲ್ ಚಿತ್ರದಲ್ಲಿ ಪೋಷಕ ಪಾತ್ರದ ಉತ್ತಮ ನಟನೆಗಾಗಿ ಪ್ರಶಸ್ತಿ ಲಭಿಸಿತು
2010 – ಲವ್ ಆಜ್ ಕಲ್‌ ನಲ್ಲಿ ಉತ್ತಮ ಪೋಷಕ ಪಾತ್ರಕ್ಕಾಗಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಲಭಿಸಿತು
ಚಲನಚಿತ್ರಗಳ ಪಟ್ಟಿ
ಮೇರಾ ನಾಮ್ ಜೋಕರ್ (1970) ಸಿಮಿ
ಬಾಬಿ (1973) ಡಿಂಪಲ್ ಕಪಾಡಿಯಾ
ಝಿಂದಾ ದಿಲ್ (1975)
ರಾಜಾ(1975 ಸಿನಿಮಾ) (1975) ಸುಲಕ್ಷಣಾ ಪಂಡಿತ್
ರಾಫೋ ಚಕ್ಕರ್ (1975) ನಿತೂ ಸಿಂಗ್
ಖೇಲ್ ಖೇಲ್ ಮೇನ್ (1975) ನಿತೂ ಸಿಂಗ್
ರಂಗೀಲಾ ರತನ್ (1976) ಪರ್ವೀನ್ ಬಾಬಿ
ಲೈಲಾ ಮಜ್ನು (1976) ರಂಜಿತಾ
ಗಿನ್ನಿ ವೌರ್ ಜಾನಿ
ಬರೋಡ್ (1976) ರೀನಾ ರಾಯ್/ಶೋಮಾ ಆನಂದ್
ಕಭೀ ಕಭೀ (1976) ನಿತೂ ಸಿಂಗ್/ನಸೀಮ್
ಹಮ್ ಕಿಸಿ ಸೇ ಕಮ್ ನಹೀ (1977) ಜೀನತ್ ಅಮನ್/ಕಾಜಲ್ ಕಿರನ್
ದೂಸರಾ ಆದ್‌ಮಿ (1977) ನಿತೂ ಸಿಂಗ್
ಚಲಾ ಮುರಾರಿ ಹೆರೋ ಬನ್ನೆ (1977)
ಅಮರ್ ಅಕ್ಬರ್ ಆಂಟೋನಿ (1977) ನಿತೂ ಸಿಂಗ್
ಫೂಲ್ ಕಿಲೇ ಹೇನ್ ಗುಲ್‌ಶನ್ ಗುಲ್‌ಶನ್ (1978) ಮೌಶ್‌ಮಿ
ಪತಿ ಪತ್ನಿ ವೌರ್ ವೂಹ್ (1978)
ಝಹ್‌ರೀಲಾ ಇನ್‌ಸಾನ್ (1978)ನಿತೂ ಸಿಂಗ್/ಮೌಶ್‌ಮೀ
ನಯಾ ದೌರ್ (1978)
ಬದಲ್ ರಿಶ್ತೆ (1978) ರೀನಾ ರಾಯ್
ಅನ್‌ಜಾನೇ ಮೈನ್ (1978)
ಸರ್ಗಮ್ (1979) ಜಯಪ್ರದಾ
ಸಲಾಮ್ ಮೇಮ್‌ಸಾಬ್ (1979)
ಜೂಟಾ ಕಹೀನ್ ಕಾ (1979) ನಿತೂ ಸಿಂಗ್
ದುನಿಯಾ ಮೇರೆ ಜಬ್ ಮೇ (1979)ನಿತೂ ಸಿಂಗ್
ಆಪ್ ಕೇ ದಿವಾನಾ (1980) ಟೈನಾ ಮುನಿಮ್
ದೋ ಪ್ರೇಮಿ (1980) ಮೌಶಮಿ
ಧನ್ ದೌಲತ್ (1980)
ಕರ್ಜ್ (1980) ಟೈನಾ ಮುನಿಮ್
ಕಟಿಲಾನ್ ಕೇ ಕಟೀಲ್ (1981) ಟೈನಾ ಮುನಿಮ್
ನಸೀಬ್ (1981) ಕಿಮ್
(1981) ಪೂನಮ್ ದಿಲ್ಲೋನ್
ಝಮಾನೆ ಕೋ ದಿಖಾನಾ ಹೈ (1981) ಪದ್ಮಿನಿ ಕೊಹಾಪುರೆ
ಯೇ ವಾದಾ ರಹಾ (1982) ಟೈನಾ ಮುನಿಮ್/ಪೂನಮ್ ದಿಲ್ಲೋನ್
ಧೀದರ್-ಇ-ಯಾರ್ (1982) ಟೈನಾ ಮುನಿಮ್
ಪ್ರೇಮ್ ರಾಗ್ (1982) ಪದ್ಮಿನಿ ಕೊಹಾಪುರೆ
ಬಡೆ ದಿಲ್ ವಾಲಾ (1983)ಟೈನಾ ಮುನಿಮ್
ಕೂಲಿ (1983)ಶೋಮಾ ಆನಂದ್
ದುನಿಯಾ (1984)ಅಮ್ರಿತಾ ಸಿಂಗ್
ತವೈಫ್ (1984) ರತಿ ಅಗ್ನಿಹೋತ್ರಿ
ಆನ್ ವೌರ್ ಶಾನ್ (1984)
ಯಹ್ ಇಶ್ಕ್ ನಹೀನ್ ಆಸಾನ್ (1984) ಪದ್ಮಿನಿ ಕೊಹಾಪುರೆ
ಸಿತಮ್‌ಗರ್ (1985) ಪೂನಮ್ ದಿಲ್ಲೋನ್
ಸಾಗರ್ (1985)ಡಿಂಪಲ್ ಕಪಾಡಿಯಾ
ಪಹಿ ಬದಲ್ ಗಯೇ (1985)
ನಸೀಬ್ ಅಪನಾ ಅಪನಾ (1986)ಫರಾಹ್/ರಾಧಿಕಾ
ನಾಗಿನ (1986) ಶ್ರೀದೇವಿ
ಪ್ಯಾರ್ ಕೇ ಕಬಿಲ್ (1987)ಪದ್ಮಿನಿ ಕೊಹಾಪುರೆ
ಹವಾಲಾತ್ (1987) ಮಂದಾಕಿನಿ
ಸಿಂಧೂರ್ (1987) ಜಯಪ್ರದಾ
ವೊವ್ರಾಶ್‌ಚನಿಯೇ ಬಾಗ್ದಾದ್ ಕೊಗೊ -ವೋರಾ (1988)
ವಿಜಯ್ (1988) ಸೋನಮ್
ಜನಮ್ ಜನಮ್ (1988) ವಿನುತಾ ಗೊಯಲ್
ಹಮಾರಾ ಖಾಂದಾನ್ (1988) ಫರಾಹ್
ಘರ್ ಘರ್ ಕೀ ಕಹಾನಿ (1988)ಜಯಪ್ರದಾ/ಅನಿತಾ ರಾಜ್
ನಖಬ್ (1989) ಫರಾಹ್
ಹತ್ಯಾರ್ (1989) ಸಂಗೀತಾ ಬಿಜಲಾನಿ
ಚಾಂದನಿ (1989) ಶ್ರೀದೇವಿ
ಬಡೇ ಘರ್ ಕೀ ಬೇಟಿ (1989) ಮಿನಾಕ್ಷಿ ಶೇಷಾದ್ರಿ
ಪರಾಯ ಘರ್ (1989)
ಖೋಜ್ (1989)ಕಿಮಿ ಕಾತ್ಕರ್
ಶೇಷ್ ನಾಗ್ (1990)ಮಂದಾಕಿನಿ
ಶೇರ್ ದಿಲ್ (1990)
ಆಜಾದ್ ದೇಶ್ ಕೆ ಗುಲಾಮ್ (1990) ರೇಖಾ
ಅಮೀರಿ ಗರೀಬಿ (1990)ನೀಲಮ್
ಘರ್ ಪರಿವಾರ್ (1991)
ಅಜೂಬಾ (1991) ಸೋನಮ್
ಹೆನ್ನಾ (ಸಿನಿಮಾ) (1991) ಜೇಬಾ ಭಕ್ತಿಯಾರ್/ಅಶ್ವಿನಿ ಭಾವೆ
ರಣಭೂಮಿ (1991) ನೀಲಮ್
ಬಂಜರನ್ (1991) ಶ್ರೀದೇವಿ
ಬೋಲ್ ರಾಧಾ ಬೋಲ್ (1992) ಜೂಹಿ ಚಾವ್ಲಾ
ದಿವಾನಾ (1992) …. ದಿವ್ಯ ಭಾರತಿ
ಶ್ರೀಮಾನ್ ಆಶಿಕೀ (1993) ಊರ್ಮಿಳಾ ಮಾತೊಂಡ್ಕರ್
ಶಹಿಬಾನ್ (1993) ಮಾಧುರಿ ದೀಕ್ಷಿತ್/ಸೋನು ವಾಲಿಯಾ
ಗುರುದೇವ್ (1993)ಶ್ರೀದೇವಿ
ಅನ್‌ಮೋಲ್ (1993)ಮನಿಷಾ ಕೊಯಿರಾಲಾ/ಸುಜಾತಾ ಮೆಹತಾ
ದಾಮಿನಿ – ಲೈಟನಿಂಗ್ (1993)ಮೀನಾಕ್ಷಿ ಶೇಷಾದ್ರಿ
ಧರತೀಪುತ್ರಾ (1993) ಜಯಪ್ರದಾ
ಇಜ್ಜತ್ ಕೀ ರೋಟಿ (1993)ಜೂಹಿ ಚಾವ್ಲಾ
ಮೊಹಬತ್ ಕೀ ಅರ್ಜೂ (1994) ಅಶ್ವಿನಿ ಭಾವೆ
ಈನಾ ಮೀನಾ ದೀಕಾ (1994)ಜೂಹಿ ಚಾವ್ಲಾ
ಸಾಜನ್ ಕಾ ಘರ್ (1994) ಜೂಹಿ ಚಾವ್ಲಾ
ಪೆಹಲಾ ಪೆಹಲಾ ಪ್ಯಾರ್ (1994) ಟಬೂ
ಪ್ರೇಮ್ ಯೋಗ್ (1994)ಮಧೂ
ಸಾಜನ್ ಕೀ ಬಹೂನ್ ಮೇ (1995) ಟಬೂ/ರವೀನಾ ಟಂಡನ್
ಹಮ್ ದೊನೋ (1995) ಪೂಜಾ ಭಟ್
ಯರಾನಾ (1995)ಮಾಧುರಿ ದೀಕ್ಷಿತ್
ಪ್ರೇಮ್ ಗ್ರಂಥ್ (1996)ಮಾಧುರ್ ದೀಕ್ಷಿತ್
ದರಾರ್ (1996) … ಜೂಹಿ ಚಾವ್ಲಾ
ಕೌನ್ ಸಚ್ಚಾ ಕೌನ್ ಜೂಟಾ (1997)ಶ್ರೀದೇವಿ
ಜೈ ಹಿಂದ್ (1999)ರವೀನಾ ಟಂಡನ್
ಏಚಿಡಿobಚಿಚಿಡಿ: ಖಿhe ಃusiಟಿess oಜಿ ಐove (2000)ಜೂಹಿ ಚಾವ್ಲಾ
ರಾಜು ಚಾಚಾ (2000) …
ಕುಚ್ ಕಟ್ಟೀ ಕುಚ್ ಮೀಠಿ (2001)ರತಿ ಅಗ್ನಿಹೊತ್ರಿ
ಯಹ್ ಹೈ ಜಲ್ವಾ (2002) ರತಿ ಅಗ್ನಿಹೋತ್ರಿ
ಕುಚ್ ತೋ ಹೈ (2003) .. ಕನು ಗಿಲ್
ಲವ್ ಅಟ್ ಟೈಮ್ಸ್ ಸ್ಕ್ವೇರ್ (2003) ತನುಜಾ
ತೆಹಿ‌ಝೀಬ್ (2003) ಶಬಾನಾ ಆಜ್ಮೀ
ಹಮ್ ತುಮ್ (2004)ರತಿ ಅಗ್ನಿಹೋತ್ರಿ
ಪ್ಯಾರ್ ಮೇ ಟ್ವಿಸ್ಟ್ (2005) ಡಿಂಪಲ್ ಕಪಾಡಿಯಾ
ಫನ್ನಾ (2006)ಕಿರೂನ್ ಖೇರ್
ಡೋನ್ಟ್ ಸ್ಟಾಪ್ ಡ್ರೀಮಿಂಗ್ (2007)
ನಮಸ್ತೆ ಲಂಡನ್ (2007)
ಓಂ ಶಾಂತಿ ಓಂ (2007) ವಿಶೇಷ ಪಾತ್ರ
ಸಂಬಾರ್ ಸಲ್‌ಸಾ (2007)
ಏರ್‌ಪೋರ್ಟ್ (2008)
ಕಲಾಷ್ (2008)… ವಿಶೇಷ ಪಾತ್ರ
ಟೋಡಾ ಪ್ಯಾರ್ ತೋಡಾ ಮ್ಯಾಜಿಕ್ (2008)
ಲುಕ್ ಬೈ ಚಾನ್ಸ್ (2008)ಜೂಹಿ ಚಾವ್ಲಾ
ಡೆಲ್ಲಿ6 (2009)ತನ್‌ವಿ ಆಜ್ಮಿ
ಲವ್ ಆಜ್ ಕಲ್ (2009)ನಿತೂ ಸಿಂಗ್
ಕಲ್ ಕಿಸನೇ ದೇಖಾ (2009)
ಚಿಂಟೂಜೀ (2009)

ನಿಧನ
ರಿಷಿ ಕಪೂರ್ ಇವರು 30 ಏಪ್ರಿಲ್ 2020 ರಂದು ನಿಧನ ಹೊಂದಿದರು. ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ರಿಷಿ ಕಪೂರ್ ಇಂದು ನಿಧನರಾಗಿದ್ದಾರೆ. ರಿಷಿ ಕಪೂರ್ ಅವರಿಗೆ 67 ವರ್ಷಗಳಾಗಿತ್ತು. ಅನಾರೋಗ್ಯದಿಂದಾಗಿ ಅವರನ್ನು ಮುಂಬೈನ ಎಚ್‍ಎನ್ ರಿಲಯನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

courtesy : Wikipedia 

Leave a Reply