ಜೈಪುರ: ಲಾಕ್‌ಡೌನ್‌ ದೆಸೆಯಿಂದಾಗಿ ಆರ್ಥಿಕ ವಹಿವಾಟುಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಹಲವರು ತಮ್ಮ ಮೂಲ ಉದ್ಯೋಗಗಳಿಂದ ವಿಮುಖರಾಗುತ್ತಿದ್ದು, ಇಂಥದೇ ಪ್ರಕರಣವೊಂದರಲ್ಲಿ ರಾಜಸ್ಥಾನದ ಜಾದೂಗಾರನೊಬ್ಬ ಹೊಟ್ಟೆಪಾಡಿಗಾಗಿ ತರಕಾರಿ ಮಾರುತ್ತಿರುವ ಸುದ್ದಿ ವರದಿಯಾಗಿದೆ. ಧೋಲ್‌ಪುರ್ ನಿವಾಸಿ ಆರ್. ಜೆ.ಸಾಮ್ರಾಟ್ ಜಾದೂಗಾರ್ ಎಂದೇ ಪ್ರಸಿದ್ಧನಾಗಿದ್ದ ರಾಜು ಮಹೋರ್ (38) ತನ್ನ ಹದಿನೈದು ವರ್ಷಗಳ ಜಾದೂಗಾರಿಕೆ ವೃತ್ತಿಯನ್ನು ತೊರೆದು ಹೊಟ್ಟೆಪಾಡಿಗಾಗಿ ತರಕಾರಿ ಮಾರಬೇಕಾಗಿರುವ ಅನಿವಾರ್ಯತೆಗೆ ತುತ್ತಾಗಿದ್ದಾರೆ.

ಕೊರೊನಾ ವೈರಸ್ ನನ್ನ ಸಂಪೂರ್ಣ ವಹಿವಾಟನ್ನೇ ಸರ್ವನಾಶ ಮಾಡಿದೆ. ನನ್ನ ತಂಡದಲ್ಲಿದ್ದ 15 ಮಂದಿ ಸಹಾಯಕರು ಇಂದು ನಿರುದ್ಯೋಗಿಗಳಾಗಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಮನೆ ಬಾಡಿಗೆ ಕಟ್ಟಲು ಮತ್ತು ಕುಟುಂಬ ಘೋಷಣೆಯ ಬಗ್ಗೆ ಆಲೋಚಿಸಿದಾಗ ನನಗೆ ತರಕಾರಿ ಮಾರುವುದನ್ನು ಬಿಟ್ಟು ಬೇರೆ ದಾರಿಯೇ ಉಳಿದಿರಲಿಲ್ಲ ಎಂದು ರಾಜು ನೊಂದು ನುಡಿದಿದ್ದಾನೆ.

LEAVE A REPLY

Please enter your comment!
Please enter your name here