ಸಾಂದರ್ಭಿಕ ಚಿತ್ರ

ಅಬುಧಾಬಿ: ಅಬುಧಾಬಿಯ ಬಿಗ್ ಟಿಕೆಟ್ ಲಾಟರಿಯಲ್ಲಿ ಕೇರಳದ ಮುಹಮ್ಮದ್‍ ಕುಂಞ ವಿಜೇತರಾಗಿದ್ದಾರೆ. ಬುಧವಾರ ನಡೆದ ಲಾಟರಿ ಡ್ರಾದಲ್ಲಿ 70ಲಕ್ಷ ದಿರ್‍ಹಂ ಬಹುಮಾನ (13 ಕೋಟಿ ರೂ.) ಮುಹಮ್ಮದ್ ಕುಂಞ ಮಯ್ಯಳತ್ತ್ ಗೆದ್ದಿದ್ದಾರೆ. ತಾನು ಗೆದ್ದಿದ್ದೇನೆನ್ನುವ ಫೋನ್ ಕರೆ ಬಂದಾಗ ತನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಮುಹಮ್ಮದ್ ಕುಂಞ ಹೇಳಿದರು.

ಗೆಳೆಯ ಹಾಗೂ ಸಂಬಂಧಿಕನಾದ ಅಬೂಬಕರ್ ಎಂಬವರ ಕಿಡ್ನಿ ಕಸಿ ಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ಕೊಡುವುದು ಮೊದಲ ಗುರಿಯಾಗಿದೆ ಎಂದು ಅವರು ತಿಳಿಸಿದರು. ಬದುಕನ್ನೇ ಬದಲಾಯಿಸಿದ ದಿನವಿದು. ಮನೆಯೆಂಬ ಕನಸ್ಸು ಇನ್ನು ನನಸಾಗಿಸಿಕೊಳ್ಳಬೇಕು. ಮತ್ತು ಸಾಧ್ಯವಾದರೆ ಒಂದು ವ್ಯಾಪಾರ ಆರಂಭಿಸಬೇಕೆಂದು ಮುಹಮ್ಮದ್ ಕುಂಞ ಹೇಳಿದ್ದು, ಅವರೀಗ ಅಬುಧಾಬಿಯ ಒಂದು ಬಟ್ಟೆ ಅಂಗಡಿಯಲ್ಲಿ ಉದ್ಯೋಗದಲ್ಲಿದ್ದಾರೆ.

ಮುಖ್ಯಮಂತ್ರಿಯ ನಿರಾಶ್ರಿತರ ನಿಧಿಗೆ ಒಂದು ಮೊತ್ತವನ್ನು ನೀಡುವೆ ಎಂದು ಅವರು ತಿಳಿಸಿದರು. ಮುಹಮ್ಮದ್ ಕುಂಞಯವರ ಪತ್ನಿ ಮತ್ತು ಇಬ್ಬರು ಮಕ್ಕಳು ಊರಿನಲ್ಲಿದ್ದಾರೆ. ಕಳೆದ ಹದಿನೈದುವರ್ಷಗಳಿಂದ ಅಬುಧಾಬಿಯಲ್ಲಿ ಕೆಲಸದಲ್ಲಿದ್ದಾರೆ. ಬುಧವಾರ ನಡೆದ ಡ್ರಾದಲ್ಲಿ ಕೇರಳದ ವಿವೇಕ್ ನಾರಾಯಣನ್ ಮೆನನ್ , ಮಿಥುನ್ ಸೆಬಾಸ್ಟಿಯನ್‍ರಿಗೆ ತಲಾ 1,00,000 ದಿರ್‍ಹಂ ಬಹುಮಾನ ಲಭಿಸಿತ್ತು.

Leave a Reply