ನವದೆಹಲಿ : ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಸಾವಿನ ವದಂತಿಗಳ ಬಗ್ಗೆ ಅವರ ಪತಿ ಗೋಲ್ಡಿ ಬೆಹ್ಲ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ವದಂತಿಗಳನ್ನು ಹರಡಿ ಭಾವನೆಗಳಿಗೆ ಧಕ್ಕೆ ಉಂಟು ಮಾಡದಿರುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಜವಾಬ್ದಾರಿಯುತವಾಗಿ ಬಳಸಿ ಎಂದು ಮನವಿ ಮಾಡಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಂ ಸೋನಾಲಿ ಬೇಂದ್ರೆಗೆ ಸಂತಾಪ ಸೂಚಿಸಿ ನಂತರ ತಮ್ಮ ತಪ್ಪನ್ನು ತಿದ್ದಿಕೊಂಡ ಮರುದಿನವೇ ಈ ಪ್ರತಿಕ್ರಿಯೆ ಹೊರ ಬಂದಿದೆ.
ಹಿಂದಿ ಚಿತ್ರರಂಗದ ಮೋಹಕ ತಾರೆ ಸೋನಾಲಿ ಬೇಂದ್ರೆ 43 ಸಂಕೀರ್ಣ ಸ್ವರೂಪದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಸದ್ಯ ನ್ಯೂಯಾರ್ಕ್ ನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.