ಈ ಗ್ರಾಮೀಣ ಭಾಗದ ಬಂದ ಯುವತಿ ಅಪ್ರತಿಮ ಸಾಧನೆ ಮಾಡಿದ್ದಾಳೆ. ‘ಅತ್ಯಾಚಾರ ನಿರೋಧಕ ಅಂಡರ್‌ವೇರ್’ ರಚಿಸಿದ ಸೀನು ಕುಮಾರಿ ಮೂಲತ ಉತ್ತರಪ್ರದೇಶದ ಫರೂಖಾಬಾದ್‌ ಊರಿನವರು. ಈ ಅಂಡರ್ ವೇರ್ ತಯಾರಿಸಲು ಆಕೆಗೆ ಸುಮಾರು 4,000 ರೂ. ಖರ್ಚಾಗಿದೆ. ಚಾಕುವಿನಿಂದ ಕತ್ತರಿಸಿದರೂ ಇದನ್ನು ಭೇದಿಸಲು ಸಾಧ್ಯವಿಲ್ಲದಂತೆ ವಿನ್ಯಾಸಗೊಳಿಸಲಾಗಿದೆ.

ವಿಶೇಷವೆಂದರೆ, ಈ ಈ ಅಂಡರ್’ವೇರ್‌ನಲ್ಲಿ ಒಂದು ಲಾಕ್, ಜಿಪಿಎಸ್ ಎಚ್ಚರಿಕೆ ವ್ಯವಸ್ಥೆ ಮತ್ತು ವಿಡಿಯೋ ಕ್ಯಾಮರಾ ಅಳವಡಿಸಲಾಗಿದೆ.

ತಂತ್ರಜ್ಞಾನದ ಸಹಾಯದಿಂದ ತಯಾರಿಸಲ್ಪಟ್ಟ ಈ ಅಂಡರ್ ವೇರ್ ಜಿಪಿಎಸ್ ಮುಖಾಂತರ ಎಚ್ಚರಿಕೆಯ ಸಂದೇಶ ಕಳುಹಿಸುತ್ತದೆ. ಕಾಮುಕರು ಮಹಿಳೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದರೆ ಇದು ಪೊಲೀಸರಿಗೆ ಹಾಗೂ ಸಾಧನಲ್ಲಿ ನೋಂದಾಯಿತವಾದ ಸಂಬಂಧಿಕರ ದೂರವಾಣಿಗೆ ಸಂದೇಶ ರವಾನಿಸುತ್ತದೆ. ಇದರಿಂದ ಪೊಲೀಸರಿಗೆ ಘಟನಾ ಸ್ಥಳವನ್ನು ಪತ್ತೆ ಹಚ್ಚಲು ಸುಲಭ ಮತ್ತು ಸಂಭಾವ್ಯ ಅವಘಡವನ್ನು ತಡೆಯಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ಎಂತೆಂತಹ ಪ್ರತಿಭೆಗಳು ಅಡಗಿ ಕೂತಿವೆ ಎಂಬುದಕ್ಕೆ ಉತ್ತರ ಪ್ರದೇಶದ ಸೀನು ಕುಮಾರಿ ಒಂದು ಉದಾಹರಣೆ..

Leave a Reply