ಕೊಲಂಬಿಯ: ರಿಯಲ್ ಲೈಫ್ ಸ್ಪೈಡರ್ ಮ್ಯಾನ್‍ನ ಫೋಟೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.ಪೊವೆಲ್ ಗೊಗುಲಾನ್ ಎಂಬ ಇಪ್ಪತೈದುವರ್ಷದ ಯುವಕ 12 ಮಹಡಿಯ ಕಟ್ಟಡಕ್ಕೆ ಯಾವುದೇ ಸುರಕ್ಷಕ್ರಮ ಅನುಸರಿಸದೆ ಹತ್ತಿದ್ದಾನೆ. ಈ ಅಪರಾಧಕ್ಕಾಗಿ ರಶ್ಯನ್ ಸ್ಪೈಡರ್ ಮ್ಯಾನ್ ಎಂದುಸುಪ್ರಸಿದ್ಧಿ ಪಡೆದಪೊವೆಲ್‍ನನ್ನು ಪೊಲೀಸರು ದಸ್ತಗಿರಿ ಮಾಡಿದರು.ಪೊವೆಲ್‍ರಿಗೆಹನ್ನೆರಡುಮಹಡಿಯ ಮಿಲೇನಿಯಂ ಕಟ್ಟಡ ಹತ್ತಲು ಕೇವಲ ಹತ್ತುನಿಮಿಷ ಸಾಕಾಯಿತು. ಇವರು ಅದಕ್ಕಾಗಿ ಒಂದು ವಾರಗಳಿಂದ ತಯಾರಿ ನಡೆಸಿದ್ದಾರೆ.

ಕೊಲಂಬಿಯದಲ್ಲಿಇದಕ್ಕಿಂತ ಮೊದಲುಇನ್ನೊಂದುಕಟ್ಟಡವನ್ನುಪೊವೆಲ್ ಹತ್ತುವಮೂಲಕ ದಾಖಲೆ ಮಾಡಿದ್ದರು.ಇದುಬಹಳ ಉತ್ತಮ ಅನುಭವವಾಗಿದೆ. ಬಹಳ ಸುಲಭವಾಗಿ ಕಟ್ಟಡ ಏರಿದೆ ಎಂದು ಪೊವೆಲ್ ಹೇಳಿಕೊಂಡಿದ್ದಾರೆ.ಪೊವೆಲ್ 10 ತಿಂಗಳ ದಕ್ಷಿಣ ಅಮೆರಿಕ ಪ್ರವಾಸದಲ್ಲಿದ್ದಾರೆ.ಪರಾಗ್ವೆ,ಬೊಲಿವಿಯ,ಪೆರು, ಮತ್ತು ಇಕ್ವಡೊರ್‍ನಲ್ಲಿ ಕ್ಲೈಂಬಿಂಗ್ ಚ್ಯಾಲೆಂಜ್‍ಗೆ ಒಪ್ಪಿಗೆ ನೀಡಿದ್ದಾರೆ.

177 ಅಡಿ ಎತ್ತರದ ಕಟ್ಟಡವನ್ನು ಹೊರಗಿನಿಂದ ಹತ್ತುವುದಾಗಿ ಪೊವೆಲ್ ನಿರ್ಧರಿಸಿದ್ದರು.ಪೊವೆಲ್ ಕಟ್ಟಡದ ಹನ್ನೆರಡು ಮಹಡಿಯನ್ನು ಏರಿದ ಬಳಿಕ ಅಲ್ಲಿದ್ದ ಪೊಲೀಸರು ಅವರನ್ನು ತಡೆದು ಬಂಧಿಸಿದರು. ನಂತರ ಸ್ಥಳೀಯ ವಕೀಲರ ಕಚೇರಿಗೆ ಕರೆದುಕೊಂಡು ಹೋಗಲಾಯಿತು.

Leave a Reply