ಮುಂಬೈ: ವಿಶ್ವ ಕ್ರಿಕೆಟ್ ರಂಗದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲಿಸಿದ ದಾಖಲೆಗಳು ಅಪಾರ. ಈ ಹಿಂದೆ ಅವರು ಸ್ಥಾಪಿಸಿದ ಕೆಲ ದಾಖಲೆಗಳನ್ನು ಇಂದಿಗೂ ಮುರಿಯಲು ಸಾಧ್ಯವಾಗಿಲ್ಲ. ಸಚಿನ್ ಸ್ಥಾಪಿಸಿದ ದಾಖಲೆಗಳಲ್ಲಿ ನೂರು ಶತಕಗಳನ್ನು ಸಿಡಿಸಿದ್ದು ವಿಶೇಷ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೂರು ಶತಕ ಬಾರಿಸುವುದು ಸುಲಭದ ಮಾತೇನಲ್ಲ. ಆದರೆ ದಾಖಲೆಗಳ ರಾಜ ಸಚಿನ್ ತಮ್ಮ ಅಂತಾರಾಷ್ಟ್ರೀಯ ಜೀವನದ ಅವಧಿಯಲ್ಲಿ ಶತಕಗಳ ಶತಕ ಪೂರೈಸಿದ್ದು ಒಂದು ವಿಶೇಷ. 2002 ರ ಮಾರ್ಚ್ ಎರಡನೇ ವಾರದಲ್ಲಿ ಬಾಂಗ್ಲಾದೇಶದ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾ ದೇಶ ಕ್ರಿಕೆಟ್ ಸಂಸ್ಥೆಯ ಆತಿಥ್ಯದಲ್ಲಿ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಮಾರ್ಚ್ 16 ರಂದು ಭಾರತ, ಬಾಂಗ್ಲಾದೇಶ ತಂಡವನ್ನು ಎದುರಿಸುವ ಸಮಯ. ಆ ಹಂತದಲ್ಲಿ ಸಚಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 99 ಶತಕ ಪೂರೈಸಿದ್ದರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ನೂರನೇ ಶತಕ ಪೂರೈಸುತ್ತಾರೆಂಬ ಅವರ ಅಭಿಮಾನಿಗಳ ಆಸೆಯನ್ನು ಮಾಸ್ಟರ್ ಬ್ಲಾಸ್ಪರ್ ಪೂರೈಸಿ ಅಪೂರ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು.
ಟೆಸ್ಟ್ ಕ್ರಿಕೆಟ್ ನಲ್ಲಿ 51 ಶತಕ ಗಳಿಸಿದ ಸಚಿನ್, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 114 ಎಸೆತಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಬಾರಿಸಿ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕ ಪೂರೈಸಿದರು.

Leave a Reply