ಕೆಲವೊಮ್ಮೆ ಮನುಷ್ಯನ ಕ್ರೌರ್ಯಕ್ಕೆ ಮಿತಿ ಇರುವುದಿಲ್ಲ. ಕೆಲವು ವಾರಗಳ ಹಿಂದೆ ಚೆನ್ನೈಯಲ್ಲಿ ವ್ಯಕ್ತಿಯೊಬ್ಬ ನಾಯಿಯನ್ನು ರಸ್ತೆಯಲಿ ಎಳೆದು ಬಡಿದು , ಕೊಳಚೆ ನೀರಿಗೆ ಹಾಕಿ ಬರ್ಬರತೆ ತೋರಿದ್ದ ಘಟನೆ ಬೆಳಕಿಗೆ ಬಂದಿತ್ತು.
ಇದೀಗ ಮತ್ತೊಂದು ಪ್ರಾಣಿಯ ಮೇಲೆ ನಡೆದ ಕ್ರೌರ್ಯ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಎರಡು ನಾಯಿ ಮರಿಗಳನ್ನು ಎಂಟನೇ ಮಹಡಿಯಿಂದ ಕೆಳಗೆ ಎಸೆದು ಕೊಂದ ಘಟನೆ ಗುರುಗ್ರಮದಲ್ಲಿ ನಡೆದಿದೆ.
ನಾಯಿ ಮರಿಗಳು ಸುಮಾರು ಏಳೆಂಟು ತಿಂಗಳದ್ದಾಗಿದ್ದು, ಕೆಳಗೆ ಬಿದ್ದ ತಕ್ಷಣ ಜೀವ ಬಿಟ್ಟಿದೆ. ಈ ನಾಯಿ ಮರಿಗಳು ಇರಾಕೀ ಪ್ರಜೆಯೊಬ್ಬನದ್ದಾಗಿದ್ದು, ಆತ ಆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದ. ಅದೇ ಸಂಕೀರ್ಣದಲ್ಲಿ ವಾಸಿಸುತ್ತಿದ್ದ ನಿಕಿತಾ ಎಂಬ ಮಹಿಳೆ ಈ ಘಟನೆಗೆ ಸಾಕ್ಷಿಯಾಗಿದ್ದು, ಈ ಘಟನೆಯ ಬಳಿಕ ಪ್ರಾಣಿ ಹಕ್ಕು ಸಂಘದವರು ಆತನ ವಿರುದ್ಧ ಕೇಸು ಹಾಕಿದ್ದಾರೆ. ಘಟನೆಯ ಬಳಿಕ ವ್ಯಕ್ತಿ ನಾಪತ್ತೆಯಾಗಿದ್ದಾನೆ.

Leave a Reply