ಎರ್ನಾಕುಲಂ: ಇದು ನಮ್ಮ ಊರು: ಈ ಕೊರೋನಾ ಕಾಲದಲ್ಲಿ ಎಲ್ಲರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದರೆ ತಪ್ಪಾಗಲಾರದು. ಇಂತಹ ಕಷ್ಟ ಕಾಲ ದಲ್ಲಿ ಕೇರಳದ ಸೆಲೂನ್ ಮಾಲೀಕರೊಬ್ಬರು 14 ವರ್ಷ ದೊಳಗಿನ ಮಕ್ಕಳಿಗೆ ಮತ್ತು ವಯೋ ವೃರ್ದ್ಧರಿಗೆ ಉಚಿತವಾಗಿ ಸೇವೆ ನೀಡುವುದಾಗಿ ಘೋಷಿಸಿದ್ದಾರೆ. ಎರ್ನಾಕುಲಂ ಜಿಲ್ಲೆಯ ಕತ್ರಿಕಾಡವಿನಲ್ಲಿ ಕ್ಷೌರಿಕನ ಅಂಗಡಿಯೊಂದರ ಮಾಲೀಕರು ಈ ಸೌಲಭ್ಯವನ್ನು ಒದಗಿಸಿದ್ದಾರೆ. ಗೋಪಿ ಹೆಸರಿನ ಮಾಲೀಕರು ತಮ್ಮ ಸಲೂನ್‌ಗೆ ಬರುವ 14 ವರ್ಷದವರೆಗಿನ ಮಕ್ಕಳು ಮತ್ತು ವೃದ್ಧರು ತಮ್ಮ ಕೂದಲನ್ನು ಉಚಿತವಾಗಿ ಕತ್ತರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

Image: ANI

“ಈ ಸಾಂಕ್ರಾಮಿಕ ರೋಗವು ಮುಗಿಯುವವರೆಗೂ ಇದು ಮುಂದುವರಿಯುತ್ತದೆ. ಸಾಮಾನ್ಯ ಕ್ಷೌರಕ್ಕೆ 100 ರೂ. ಶುಲ್ಕವಿದೆ. ಯಾರಾದರೂ ಅಷ್ಟೊಂದು ಹಣವನ್ನು ಹೊಂದಿಲ್ಲದಿದ್ದರೂ, ಅವರು ಕೊಡುವ ಯಾವುದನ್ನಾದರೂ ನಾವು ತೆಗೆದುಕೊಳ್ಳುತ್ತೇವೆ. ಜನರ ಬಳಿ ಈಗ ಹಣವಿಲ್ಲ. ಹಾಗಾಗಿ ನಾನು ನಿರ್ಧಾರಕ್ಕೆ ಬಂದಿದ್ದೇನೆ ಈ ಸಾಂಕ್ರಾಮಿಕ ರೋಗದ ವಿರುದ್ಧದ ಸಮಾಜದ ಹೋರಾಟಕ್ಕೆ ಈ ಮೂಲಕ ಸಣ್ಣ ಕೊಡುಗೆ ನೀಡುತ್ತಿದ್ದೇನೆ” ಎಂದು ಗೋಪಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here