ವಾರಣಾಸಿಯ ಸಂಪರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಕಾಂಗ್ರೆಸ್ನ್ ವಿದ್ಯಾರ್ಥಿ ವಿಭಾಗ ಎನ್‌ಎಸ್‌ಯುಐ (ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ಎಬಿವಿಪಿಯನ್ನು ಸೋಲಿಸಿ ಜಯ ದಾಖಲಿಸಿದೆ. ಎನ್‌ಎಸ್‌ಯುಐ ನಾಲ್ಕು ಸ್ಥಾನಗಳಲ್ಲೂ ಗೆದ್ದಿದೆ. ಎನ್‌ಎಸ್‌ಯುಐ ಶಿವಂ ಶುಕ್ಲ ಎಬಿವಿಪಿಯ ಹರ್ಷಿತ್ ಪಾಂಡೆ ವಿರುದ್ಧ ಭಾರೀ ಅಂತರದಿಂದ ಗೆದ್ದು ಕೊಂಡರು.  ಎನ್‌ಎಸ್‌ಯುಐನ ಶಿವಂ ಶುಕ್ಲಾ ಅಧ್ಯಕ್ಷ ಸ್ಥಾನವನ್ನು ಗೆದ್ದರೆ, ಚಂದನ್ ಕುಮಾರ್ ಮಿಶ್ರಾ ಉಪಾಧ್ಯಕ್ಷರಾದರು. ಅವ್ನಿಶ್ ಪಾಂಡೆ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಪಡೆದರು ಮತ್ತು ರಜನಿಕಾಂತ್ ದುಬೆ ಗ್ರಂಥಪಾಲಕ ಸ್ಥಾನವನ್ನು ಗೆದ್ದರು.

ಶಿವಂ ಶುಕ್ಲಾ 709 ವೋಟ್ ಪಡೆದರೆ ಹರ್ಷಿತ್ ಪಾಂಡೆ ಅವರು ಅಧ್ಯಕ್ಷ ಸ್ಥಾನಕ್ಕೆ ಕೇವಲ 224 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಚಂದನ್ ಕುಮಾರ್ ಮಿಶ್ರಾ 553 ಮತಗಳನ್ನು ಪಡೆದಿದ್ದಾರೆ. ಚುನಾವಣಾ ಅಧಿಕಾರಿ ಪ್ರೊ.ಶೈಲೇಶ್ ಕುಮಾರ್ ಮಿಶ್ರಾ ಫಲಿತಾಂಶವನ್ನು ಪ್ರಕಟಿಸಿದ ನಂತರ ಉಪಕುಲಪತಿ ಪ್ರೊ.ರಾಜರಾಮ್ ಶುಕ್ಲಾ ಅವರು ಸಂಸ್ಕೃತದಲ್ಲಿ ಹೊಸ ಪದಾಧಿಕಾರಿಗಳಿಗೆ ಪ್ರಮಾಣ ವಚನ ಸ್ವೀಕರಿಸಿದರು. ಫಲಿತಾಂಶ ಪ್ರಕಟವಾದ ಬಳಿಕ ಕ್ಯಾಂಪಸ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲು ವಿಜಯೋತ್ಸವವನ್ನು ನಡೆಸಲು ಅನುಮತಿ ನೀಡಲಾಗಿಲ್ಲ ಎಂದು ಪ್ರೊಫೆಸರ್ ಶುಕ್ಲ ಹೇಳಿದರು. ವಿಜೇತ ಅಭ್ಯರ್ಥಿಗಳನ್ನು ಪೊಲೀಸ್ ಭದ್ರತೆಯಲ್ಲಿ ಅವರ ಮನೆಗಳಿಗೆ ಕಳುಹಿಸಲಾಗಿದೆ.

source : Indiatoday

LEAVE A REPLY

Please enter your comment!
Please enter your name here