ವಿಶ್ವದ ಅತೀದೊಡ್ಡ ಸಾಫ್ಟ್‌ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್ ಸಿ.ಇ.ಓ ಸತ್ಯ ನಡೆಲ್ಲಾ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಪ್ರತಿಕ್ರಿಯ ನೀಡಿದ್ದು ಈ ಕಾಯಿದೆ ಕೆಟ್ಟದು ಮತ್ತು ಅದು ನನಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ. ಸ್ವತಃ ಅಮೇರಿಕಾದಲ್ಲಿ ವಲಸೆಗಾರರಾಗಿರುವ ಸತ್ಯ ಇದೀಗ ಮೈಕ್ರೋಸಾಫ್ಟ್ ಕಂಪೆನಿಯ ಸಿ.ಇ.ಓ ಆಗಿದ್ದಾರೆ. ವಲಸೆ ದೇಶದ ಹಿತಾಸಕ್ತಿಯಿಂದ ಒಳ್ಳೆಯದು. ಭಾರತದಲ್ಲಿ ಬಾಂಗ್ಲಾದೇಶದ ವಲಸಿಗರು ಮುಂದಿನ ಯುನಿಕಾರ್ನ್ ಕಂಪನಿಯಾಗಲು ಅಥವಾ ಇನ್ಫೋಸಿಸ್ನ ಮುಂದಿನ ಸಿಇಒ ಆಗಬೇಕು ಎಂದು ನಾನು ಬಯಸುತ್ತೇನೆ ಎಂದು ಮೈಕ್ರೋಸಾಫ್ಟ್ ಸಿ.ಇ.ಓ ಸತ್ಯ ನಡೆಲ್ಲಾ ಹೇಳಿದರು. ಪ್ರತಿಯೊಂದು ದೇಶವು ತನ್ನ ಗಡಿಯನ್ನು ನಿರ್ಧರಿಸುತ್ತದೆ. ರಾಷ್ಟೀಯ ಭದ್ರತೆ ಮತ್ತು ವಲಸೆ ನೀತಿಯನ್ನು ಅದಕ್ಕೆ ಅನುಸಾರವಾಗಿ ಮಾಡುತ್ತದೆ ಮತ್ತು ಮಾಡಬೇಕು ಎಂದು ಹೇಳಿದರು.

ಆದಾಗ್ಯೂ, ಒಂದು ದೇಶವು ತನ್ನ ರಾಷ್ಟ್ರೀಯ ಭದ್ರತೆ ಅಥವಾ ಗಡಿಗಳಲ್ಲಿ ಏನನ್ನೂ ಮಾಡಬಾರದು ಎಂದು ನಾನು ಹೇಳುತ್ತಿಲ್ಲ. ಪ್ರತಿ ದೇಶದ ಸರ್ಕಾರ ಮತ್ತು ಅದರ ನಾಗರಿಕರು ಖಂಡಿತವಾಗಿಯೂ ಇದರ ಬಗ್ಗೆ ಯೋಚಿಸುತ್ತಾರೆ.  ಏಕೆಂದರೆ ವಲಸೆ ಒಂದು ದೊಡ್ಡ ವಿಷಯವಾಗಿದೆ. ಯುರೋಪ್ ಮತ್ತು ಭಾರತದಲ್ಲಿ ಇದು ಒಂದು ದೊಡ್ಡ ವಿಷಯವಾಗಿದೆ, ಇದು ಸೂಕ್ಷ್ಮ ವಿಷಯ ಎಂದು ಹೇಳಿದರು.

 

LEAVE A REPLY

Please enter your comment!
Please enter your name here