ರಿಯಾದ್: ಆರು ಲಕ್ಷ ಫೆಲೆಸ್ತೀನಿ ಸಂತ್ರಸ್ತರಿಗೆ ಸೌದಿ ಅರೇಬಿಯಾ ಪ್ರವೇಶಿಸುವುದಕ್ಕೆ ತಡೆಯೊಡ್ಡಲಾಗಿದೆಯೆಂದು ವರದಿಯಾಗಿದೆ.
ಲೆಬನಾನ್ ನಿಂದ ಬರುವ ಫೆಲೆಸ್ತೀನಿ ಸಂತ್ರಸ್ತರಿಗೆ ಮಕ್ಕಾ ಸಂದರ್ಶಿಸುವ ವೀಝಾ ನಿಷೇಧಿಸಿರುವುದಾಗಿ ಅಲ್ ಅರಬ್ ನಿನ್ನೆ ವರದಿ ಮಾಡಿತ್ತು. ಫೆಲೆಸ್ತೀನ್ ಅಥೋರಿಟಿಯ ಪಾಸ್ಪೋರ್ಟ್ ಇಲ್ಲದ ಸಂತ್ರಸ್ತರಿಗೆ ನಿಷೇಧ ಹೇರಲಾಗಿದೆ.
ಫೆಲೆಸ್ತೀನ್ ಪಾಸ್ ಪೋರ್ಟ್ ಇಲ್ಲದ ಸಂತ್ರಸ್ತರ ಅರ್ಜಿಗಳನ್ನು ಸ್ವೀಕರಿಸಬಾರದೆಂದು ಲೆಬನಾನಿನ ಸೌದಿ ರಾಯಭಾರಿ ಟ್ರಾವೆಲ್ ಏಜೆನ್ಸಿ ಗಳಿಗೆ ಸೂಚಿಸಿದ್ದಾರೆ.