ಜಿದ್ದ: ಹಜ್ ಕರ್ಮ ನಿರ್ವಹಿಸಿ ಊರಿಗೆ ಮರಳುತ್ತಿರುವ ಹಾಜಿಗಳಿಗೆ ಸೌದಿ ಅರೇಬಿಯ ಸರಕಾರ ಪವಿತ್ರ ಕುರ್ಆನ್ನನ್ನು ಉಡುಗೊರೆಯನ್ನಾಗಿ ನೀಡುತ್ತಿದೆ.
ವಿಮಾನ ನಿಲ್ದಾಣಗಳು, ಬಂದರುಗಳ ಮೂಲಕ ತಮ್ಮೂರಿಗೆ ತೆರಳುವ ಹಜ್ ಯಾತ್ರಾರ್ಥಿಗಳಿಗೆ ಪವಿತ್ರ ಕುರ್ಆನ್ ವಿತರಣೆ ನಡೆಸುವ ಕಾರ್ಯ ಆರಂಭಿಸಲಾಗಿದೆ.
ಈ ಬಾರಿ ಇದಕ್ಕಾಗಿ ಸರಕಾರ ಹದಿನಾಲ್ಕು ಲಕ್ಷ ಪ್ರತಿಗಳನ್ನು ಮುದ್ರಿಸಿದೆ. ಮದೀನಾದ ಕಿಂಗ್ ಫಹದ್ ಕುರ್ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್ನಲ್ಲಿ ಮುದ್ರಣ ಕಾರ್ಯ ನಡೆದಿದೆ.
ಇಲ್ಲಿಂದ ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಮತ್ತು ಬಂದರುಗಳಿಗೆ ಪವಿತ್ರ ಕುರ್ಆನ್ ಕಳುಹಿಸಿ ಕೊಡಲಾಗುತ್ತಿದೆ. ಇಲ್ಲಿ 39 ಭಾಷೆಗಳಲ್ಲಿ ಅನುವಾದಿಸಿದ ಪವಿತ್ರ ಕುರ್ಆನ್ ಮುದ್ರಿಸಲಾಗಿದೆ. ಇವುಗಳನ್ನು ಹಾಜಿಗಳಿಗೆ ವಿತರಿಸಲಾಗುತ್ತಿದೆ.
ಪ್ರೆಸ್ನಲ್ಲಿ 1700 ಸಿಬ್ಬಂದಿಗಳಿದ್ದು, ಮದೀನ, ಜಿದ್ದ ವಿಮಾನ ನಿಲ್ದಾಣಗಳ ಮೂಲಕ ಹಾಜಿಗಳು ಊರಿಗೆ ಮರಳುತ್ತಿದ್ದಾರೆ. ಇಲ್ಲಿ ಪ್ರಧಾನ ವಿತರಣಾ ಕಾರ್ಯ ನಡೆಯುತ್ತಿದೆ. ರಸ್ತೆ ದಾರಿಯಾಗಿ ಹೋಗುವ ಏಳು ಕೇಂದ್ರಗಳಿದ್ದು ಇಲ್ಲಿ ಮತ್ತು ಉಭಯ ಹರಮ್ನ ಲೈಬ್ರರಿ ಮೂಲಕ ಪವಿತ್ರ ಕುರ್ಆನ್ ವಿತರಣಾ ಕಾರ್ಯ ನಡೆಯುತ್ತಿದೆ. ಮುಂದಿನ ತಿಂಗಳು 14 ತಾರೀಕಿನವರೆಗೆ ಉಚಿತವಾಗಿ ಪವಿತ್ರ ಕುರ್ಆನ್ ವಿತರಣಾ ಕಾರ್ಯ ನಡೆಯಲಿದೆ.