ರಿಯಾದ್; ಸೌದಿ ಅರೇಬಿಯದ ಮಹಿಳೆಯರಿಗೆ ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಹುಡುಕುವ ನಿಟ್ಟಿನಲ್ಲಿ ಜಾಬ್ ಫೇರ್ ಆರಂಭವಾಗಿದೆ.

ರಿಯಾದ್‍ನಲ್ಲಿ ವಿವಿಧ ಕಂಪೆನಿಗಳ ಜಾಬ್ ಫೇರ್‍ಗೆ ನಲ್ವತ್ತು ಸಾವಿರಕ್ಕೂ ಹೆಚ್ಚು ಮಂದಿ ಬಂದರು. ಕಳೆದ ವರ್ಷ 3000 ಮಂದಿಗೆ ನೇಮಕಾತಿ ಸಿಕ್ಕಿತ್ತು.

ಸೌದಿಯಲ್ಲಿ ಉನ್ನತ ಶಿಕ್ಷಣ ಗಳಿಸಿರುವವರ ಸಂಖ್ಯೆಯಲ್ಲಿ ಹೆಚ್ಚು ಮಹಿಳೆಯರು ಆಗಿದ್ದಾರೆ. ಸಾಮಾನ್ಯ ಸಂಬಳದಲ್ಲಿ ಕೆಲಸ ಮಾಡುವ ಇವರಿಗೆ ಉನ್ನತ ಕಂಪೆನಿಗಳಲ್ಲಿ ಅವಕಾಶ ಮಾಡಿಕೊಳ್ಳುವ ಉದ್ದೇಶದಿಂದ ಜಾಬ್ ಫೇರ್ ಆಯೋಜಿಸಲಾಗಿದೆ.

ರಿಯಾದ್‍ನ ಕಿಂಗ್ ಫೈಸಲಿಯ್ಯ ಟವರ್‍ನಲ್ಲಿ ಅಂತಾರಾಷ್ಟ್ರೀಯ ಕಂಪೆನಿಗಳು ಉದ್ಯೋಗಿಗಳನ್ನು ಹುಡುಕುತ್ತಿದೆ. ಕಳೆದ ವರ್ಷ ಮೂರು ಸಾವಿರ ಮಂದಿ ಆಯ್ಕೆಯಾಗಿದ್ದರು.

ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಉದ್ಯೋಗಾರ್ಥಿಗಳು ಜಾಬ್ ಫೇರ್‍ಗೆ ಬಂದಿದ್ದಾರೆ. ನಿನ್ನೆ ಫೇರ್ ಆರಂಭಗೊಂಡಿದೆ. ನಲ್ವತ್ತೈದು ಸಾವಿರ ಮಂದಿ ಬಂದಿದ್ದು, ನಾಳೆ ಜಾಬ್ ಫೇರ್ ಕೊನೆಗೊಳ್ಳಲಿದೆ.

ರಾಷ್ಟ್ರೀಯ ಪರಿವರ್ತನೆಯ ಯೋಜನೆ ಅಂಗವಾಗಿ ಮಹಿಳೆಯರಿಗೆ ಉನ್ನತ ವಾತಾವರಣ ಸೃಷ್ಟಿಸಲು ಸರಕಾರ ಯತ್ನಿಸುತ್ತಿದೆ. ಮಕ್ಕಳಿಗೆ ನರ್ಸರಿ, ಮಹಿಳಾ ಉದ್ಯೋಗಿಗಳಿಗೆ ವಾಹನ ಸೌಕರ್ಯವನ್ನು ಒದಗಿಸಿಕೊಡಲಾಗಿದೆ. ಇದು ಈ ಸಲ ಜಾಬ್ ಫೇರ್‍ನಲ್ಲಿ ಯುವತಿಯರ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

Leave a Reply