ಸೂರತ್: ವಜ್ರವ್ಯಾಪಾರಿ ಸವ್‍ಜಿ ದೊಲಾಕ್ಯರು ತನ್ನ ಉದ್ಯೋಗಿಗಳಿಗೆ ದೀಪಾವಳಿ ಹಬ್ಬ ಪ್ರಯುಕ್ತ 600 ಕಾರುಗಳು ಮತ್ತು ಫ್ಲಾಟ್‍ಗಳನ್ನು ನೀಡುತ್ತಿದ್ದು ದಿಲ್ಲಿಯಲ್ಲಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಎರಡು ಕಾರುಗಳನ್ನು ಮಹಿಳಾ ಉದ್ಯೋಗಿಗಳಿಗೆ ಕೀ ಗೊಂಚಲು ನೀಡುವ ಮೂಲಕ ಉದ್ಘಾಟಿಸಿದ್ದಾರೆ. ನಂತರ ಕಂಪೆನಿ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರು ಸಹಿತ 25000 ನೆರೆದಿದ್ದ ಸಭೆಯನ್ನು ವೀಡಿಯೊ ಕಾನ್ಫೆರೆನ್ಸ್ ಮೂಲಕ ಮೋದಿ ಸಂಬೋಧಿಸಿ ಮಾತಾಡಿದ್ದಾರೆ.

ಕಂಪೆನಿಯ ಉದ್ಯೋಗಿಗಳಿಗೆ ಬೆಲೆ ಬಾಳುವ ಉಡುಗೊರೆ ನೀಡಿ ಪ್ರಸಿದ್ಧರಾದವರು ಸೂರತ್‍ನ ಹರಿಕೃಷ್ಣ ಎಕ್ಸ್‍ಪೋರ್ಟಿನ ಮಾಲಕ ಸವ್‍ಜಿ ದೊಲಾಕ್ಯ ಆಗಿದ್ದಾರೆ. ಅವರು ತನ್ನ ಉದ್ಯೋಗಿಗಳಿಗೆ ಮಾರುತಿ ಸುಝುಕಿ ಸೆಲೊರಿಯೊ ಮಾಡೆಲಿನ ಕಾರುಗಳನ್ನು ಉಡುಗೊರೆ ಕೊಟ್ಟಿದ್ದಾರೆ.

ಕಂಪೆನಿಯ ಬೆಳವಣಿಗೆಗೆ ನಿರ್ಣಾಯ ಪರಿಶ್ರಮ ನಡೆಸಿದ 1600ಕ್ಕೂ ಹೆಚ್ಚು ಇರುವ ವಜ್ರಾಭರಣ ಕೆಲಸಗಾರರಿಗೆ ಈ ಸೌಲಭ್ಯವನ್ನು ಅವರು ನೀಡಿದರು. ಇವರಿಗೆ ಇವರ ಬಯಸಿದಂತೆ ಒಂದೋ ಕಾರು ಇಲ್ಲವೇ ಫ್ಲಾಟ್ , ಎಫ್‍ಡಿ ಯಾವುದು ಬೇಕಾದರೂ ಆಯ್ದುಕೊಳ್ಳಬಹುದಾಗಿದೆ.

ಒಟ್ಟು 5500 ಮಂದಿ ಉದ್ಯೋಗಿಗಳು ಕಂಪೆನಿಯಲ್ಲಿದ್ದಾರೆ. ಇವರಲ್ಲಿ 4000 ಮಂದಿಗೆ ಹಲವು ಸಲ ಇಂತಹ ಬೆಲೆಬಾಳುವ ಉಡುಗೊರೆಯಗಳು ಲಭಿಸಿವೆ.
ತಿಂಗಳ ಹಿಂದೆ ಕಂಪೆನಿಯಲ್ಲಿ 25 ವರ್ಷಳಿಂದ ಕೆಲಸ ಮಾಡಿದ ಸೀನಿಯರ್ ಉದ್ಯೋಗಿಗಳಿಗೆ ಒಂದು ಕೋಟಿ ಬೆಲೆಯ ಬೆಂಜ್ ಎಸ್‍ಯುವಿ ಕಾರನ್ನು ದೊಲಾಕ್ಯ ಉಡುಗೊರೆ ನೀಡಿದ್ದರು.

ಕಳೆದ ವರ್ಷ 1200 ಡಾಟ್ಸನ್ ಗೊ ಕಾರನ್ನು ದೊಲಾಕ್ಯ ತನ್ನ ಉದ್ಯೋಗಿಗಳಿಗೆ ನೀಡಿದ್ದರು. ಒಂದು ಬಾರಿಯ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಗೆ 51 ಕೋಟಿರೂಪಾಯಿ ಖರ್ಚು ಮಾಡಿದ್ದರು. ತೀರ ಬಡತನದ ಪರಿಸರದಿಂದ ಬಂದಿದ್ದ ದೊಲಾಕ್ಯ ಮಾವನಿಂದ ಸಾಲ ಪಡೆದು ಸ್ವಂತ ಪರಿಶ್ರಮದಿಂದ ಒಂದು ವಜ್ರವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿದ್ದರು.

Leave a Reply