ಸಿಗರೇಟ್ ಪ್ಯಾಕ್ ಗಳ ಮೇಲೆ ಮುದ್ರಿಣವಾಗುವ ಎಚ್ಚರಿಕೆ ಸಂದೇಶವನ್ನು 85% ದಿಂದ 40% ಕ್ಕೆ ಕಡಿತಗೊಳಿಸಲು ಕರ್ನಾಟಕ ಹೈ ಕೋರ್ಟ್ ಹಸಿರು ನಿಶಾನೆ ತೋರಿಸಿತ್ತು. ಇದನ್ನು ಪ್ರಶ್ನಿಸಿ ಎನ್ ಜಿಓ ಆದ ಹೆಲ್ತ್ ಫಾರ್ ಮಿಲಿಯನ್ಸ್ ಟ್ರಸ್ಟ್‌ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿತ್ತು.

ಸುಪ್ರೀಂ ಕೋರ್ಟ್ ಇದೀಗ ಸಿಗರೇಟ್ ಪ್ಯಾಕುಗಳ ಮೇಲೆ ಮುದ್ರಣವಾಗುವ 85% ಜಾಹೀರಾತು ಎಚ್ಚರಿಕೆಯು ಕಡ್ಡಾಯ ನಿರ್ಭಂದವೆಂದು ಹೇಳಿದ್ದು ಹೈಕೋರ್ಟ್ ನಿರ್ಣಯಕ್ಕೆ ಜೈ ಎಂದಿದೆ.

ಸಿಗರೆಟ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಿ, ಸಣ್ಣ ಅಕ್ಷರಗಳಲ್ಲಿ ಬರೆಯಲಿ, ಸೇದುವವ ಅದನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಇದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಅದರಲ್ಲೂ ಅವರಲ್ಲಿ ಸಿಗರೇಟ್ ಹಾನಿಯ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯ ಇದೆ.

Leave a Reply