ಲಕ್ನೋ; ಸ್ವಯಂ ಘೋಷಿತ ಮೊಘಲ್ ರಾಜ ವಂಶಸ್ಥ ಯಾಕೂಬ್ ಹಬೀಬುದ್ದೀನ್ ಟುಸಿ 1558 ರಲ್ಲಿ ತಮ್ಮ ಪೂರ್ವಿಕರ ಸೇನಾಧಿಪತಿ ಅಯೋಧ್ಯೆಯಲ್ಲಿ ರಾಮ ಮಂದಿರ ಧ್ವಂಸ ಮಾಡಿದ್ದಕ್ಕೆ ಹಿಂದೂ ಸಮುದಾಯದೊಂದಿಗೆ ಕ್ಷಮೆ ಕೋರಿದ್ದಾರೆ.
ಮೊಘಲ್ ದೊರೆ ಬಾಬರ್ ನ ಆರನೇ ತಲೆಮಾರಿನ ಕುಡಿ ಎಂದು ಸ್ವಯಂ ಘೋಷಿಸಿರುವ ಟುಸಿ16 ನೇ ಶತಮಾನದಲ್ಲಿ ತಮ್ಮ ಪೂರ್ವಜ ಬಾಬರ್ ನ ಸೇನಾಧಿಪತಿ ಮೀರ್ ಬಕ್ವಿ ಅಯೋಧ್ಯೆಯಲ್ಲಿ ರಾಮ ಮಂದಿರ ಧ್ವಂಸ ಮಾಡಿದ್ದಕ್ಕೆ ಹಿಂದೂ ಸಮುದಾಯದೊಂದಿಗೆ ತಾನು ಕ್ಷಮೆ ಕೋರುತ್ತಿದ್ದೇನೆ ಮತ್ತು ರಾಮ ಮಂದಿರ ನಿರ್ಮಾಣಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹಿಂದೂ ಮಹಾ ಸಭೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಿಂದೂ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರ ಪ್ರಾಣಿ ಮಹಾರಾಜ ರಿಗೆ ಪತ್ರ ಹಸ್ತಾತರಿಸಿದ ಬಳಿಕ ಮಾತನಾಡಿದ ಟುಸಿ ಸೇನಾಧಿಕಾರಿಯ ಕೃತ್ಯವನ್ನು ಖಂಡಿಸಿದ್ದು, ಇದೊಂದು ಘೋರ ತಪ್ಪು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಅಯೋಧ್ಯೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನ್ಯಾಯಾಲಯಕ್ಕೆ ಮೊರೆ ಹೋಗಿರುವ ಮುಸ್ಲಿಮರು ತಮ್ಮ ಅರ್ಜಿಯನ್ನು ಹಿಂಪಡೆದು ರಾಮ ಮಂದಿರ ನಿರ್ಮಾಣಕ್ಕೆ ಬೇಷರತ್ತಾಗಿ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.