ಕೋಝಿಕ್ಕೋಡ್: ಇಲ್ಲಿನ ಬೀಚ್ ಆಸ್ಪತ್ರೆಯಲ್ಲಿ ತೊರೆಯಲಾದ ವಯೋವೃದ್ಧರಿಬ್ಬರ ಪುನರ್ವಸತಿಯನ್ನು ಕೇರಳ ಸಮಾಜ ನ್ಯಾಯ ಇಲಾಖೆ ವಹಿಸಿಕೊಂಡಿದೆ. ಇನ್ನಿಬ್ಬರನ್ನು ಅವರ ಸಂಬಂಧಿಕರು ಕರೆದುಕೊಂಡು ಹೋಗಲಿದ್ದಾರೆ.
ಲೀಗಲ್ ಸರ್ವಿಸ್ ಅಥಾರಿಟಿ ಕಾರ್ಯದರ್ಶಿ ಎಂಪಿ ಜಯರಾಜ್, ಜಿಲ್ಲಾ ಸಾಮಾಜಿನ್ಯಾಯ ಅಧಿಕಾರಿ ಅನೀತಾ ಎಸ್.ಲಿನ್ ನೇತೃತ್ವದಲ್ಲಿ ವಯೋವೃದ್ಧರನ್ನು ಸಂದರ್ಶಿಸಿ ಚರ್ಚೆ ಮಾಡಲಾಗಿದ್ದು ಇವರ ಇಷ್ಟ ಪ್ರಕಾರದಂತೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಲಾಗಿದೆ.
ಈಗ ಚಿಕಿತ್ಸೆಯಲ್ಲಿರುವ ನಾಲ್ಕು ಮಂದಿಯ ಪುನರ್ವಸತಿಯ ಹೊಣೆಯನ್ನು ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡಿದೆ. ಚಿಕಿತ್ಸೆ ಮುಗಿದೊಡನೆ ಕಣ್ಣೂರಿನ ಬಾಬುರನ್ನು ಸರಕಾರದ ವೃದ್ಧ ಮಂದಿರಕ್ಕೂ ವಿಶೇಷ ಸಾಮಥ್ರ್ಯದ ಕರ್ನಾಟಕದ ಅಶೋಕ್ ಬಾಬುರನ್ನು ಸರಕಾರದ ವಿಶೇó ಸಾಮಥ್ರ್ಯದ ಸದನಕ್ಕೂ ಕಳುಹಿಸಲಾಗುವುದು. ಇದಲ್ಲದೆ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ರಾಮಸ್ವಾಮಿ ಮತ್ತು ಬೇಬಿ ವಿನೋದಿನಿಯವರನ್ನು ವಯಸ್ಸಾದವರ ಸಂರಕ್ಷಣಾ ಕೇಂದ್ರಕ್ಕೆ ಅಕ್ಟೋಬರ್ ಒಂದರಂದು ಕಳುಹಿಸಿಕೊಡಲಾಗುವುದು.
ವಡಗರದ ಆಸಿಯಾರನ್ನು ಗಲ್ಫ್‍ನಲ್ಲಿ ಉದ್ಯೋಗದಲ್ಲಿರುವ ಮಕ್ಕಳು ನೋಡಿಕೊಳ್ಳಲಿದ್ದಾರೆ. ಬಾಲಕೃಷ್ಣರನ್ನು 32 ವರ್ಷಗಳಿಂದ ಒಟ್ಟಿಗೆ ವಾಸವಿದ್ದ ಅಭ್ಯುದಯ ಕಾಂಕ್ಷಿಗಳು ನೋಡಿಕೊಳ್ಳಲಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಆಂಧ್ರದ ದುರ್ಗಾಸ್ವಾಮಿ, ಅಪಘಾತದಲ್ಲಿ ಕೈಗೆ ಚಿಕಿತ್ಸೆ ಪಡೆಯುತ್ತಿರುವ ಬೇಪುರ್‍ನ ರವೀಂದ್ರನ್‍ರಿಗೆ ಚಿಕಿತ್ಸೆ ಪೂರ್ಣಗೊಂಡ ಬಳಿಕ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕೇರಳ ಸಾಮಾಜಿಕ ನ್ಯಾಯ ಅಧಿಕಾರಿಗಳು ತಿಳಿಸಿದ್ದಾರೆ.