ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ಪಂದ್ಯಗಳಲ್ಲಿ ನೋಬಾಲ್ ನೋಡಲು ಪ್ರತ್ಯೇಕ ಅಂಪೈರ್ ನೇಮಕ ಮಾಡುವ ಕುರಿತು ಐಪಿಎಲ್ ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಆದರೆ ಬದಲಿ ಆಟಗಾರರ ಕುರಿತು ಪವರ್ ಪ್ಲೇಯರ್ ಯೋಜನೆಯನ್ನು ಜಾರಿಗೊಳಿಸುವುದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಮುಂದಿನ ವಾರ ಆರಂಭವಾಗಲಿರುವ ರಾಷ್ಟ್ರೀಯ ಟಿ20 ಪಂದ್ಯಾವಳಿಯಲ್ಲಿ ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಎಫ್ ಟಿ ಎಫ್ ವಿಂಡೋ, ವಿದೇಶಿ ಆಟಗಾರರ ಲಭ್ಯತೆ ಭಾರತೀಯ ತಂಡದ ಎಫ್ ಟಿ ಎಫ್ ಹಾಗೂ ವಿದೇಶದಲ್ಲಿ ಸ್ನೇಹಪರ ಪಂದ್ಯಾಟ ಮೊದಲಾದ ವಿಷಯಗಳ ಕುರಿತು ಚರ್ಚಿಸಲು ಮಾಜಿ ಆಟಗಾರ ಬ್ರಿಜೇಶ್ ಪಟೇಲ್ ನೇತೃತ್ವದಲ್ಲಿ ಐಪಿಎಲ್ ಆಡಳಿತ ಮಂಡಳಿ ಸಭೆ ಮಂಗಳವಾರ ಸೇರಿತ್ತು.

ಎಲ್ಲವೂ ಸರಿ ಹೋದರೆ ನಿಯಮಿತ ನಿಯಮಿತ ಅಂಪೈರ್ ಗಳ ಜೊತೆಗೆ ಕ್ರೀಡಾಂಗಣದಲ್ಲಿ ಕೇವಲ ನೋಬಾಲ್ ವೀಕ್ಷಿಸಲು ಓರ್ವ ಪ್ರತ್ಯೇಕ ಅಂಪೈರ್ ಅನುಭವವನ್ನು ನೋಡಲಿದ್ದೀರಿ. ಆತ ಮೂರನೇ ಅಥವಾ ನಾಲ್ಕನೇ ಅಂಪೈರ್ ಅಲ್ಲ ಎಂದು ಸದಸ್ಯರಲ್ಲೊಬ್ಬರು ಹೇಳಿದರು. ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಯೋಜನೆಯನ್ನು ದೇಶಿಯ ಪಂದ್ಯಾವಳಿಗಳಲ್ಲಿ ಮೊದಲು ಪರೀಕ್ಷಿಸಬೇಕೆಂದು ಅಭಿಪ್ರಾಯ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here