ಕಾಸರಗೋಡು: ಮಗಳ ಸ್ನೇಹಿತೆಯನ್ನು ಅತ್ಯಾಚಾರಗೈದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಕಾಸರಗೋಡಿನ ಬಂದಿಯೋಡ್ ನಿವಾಸಿ ಗಂಗಾಧರಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಕುಂಬಳೆ ಪೋಲೀಸು ಠಾಣೆಯ ವ್ಯಾಪ್ತಿಗೆ ಬರುವ ಗಂಗಾಧರ ಎಂಬ ರಿಕ್ಷಾ ಚಾಲಕ ಆಧಾರ್ ಕಾರ್ಡ್ ತರಬೇಕೆಂದು ತನ್ನ ಮಗಳನ್ನು ಮತ್ತಾಕೆಯ 13ರ ಹರೆಯದ ಸ್ನೇಹಿತೆಯನ್ನು ಕುಂಬಳೆಗೆ ಕರೆದುಕೊಂಡು ಬಂದಿದ್ದು, ಬಳಿಕ ಈ ಮಕ್ಕಳನ್ನು ಬೀಚ್ ಗೆ ಕರೆದುಕೊಂಡು ಹೋಗಿ ಅಲ್ಲಿ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಆರೋಪಿಯನ್ನು ರಿಮಾಂಡ್ ಗೆ ಒಪ್ಪಿಸಲಾಗಿದೆ.