ಸಾಂದರ್ಭಿಕ ಚಿತ್ರ

ತಿರುವನಂದಪುರಂ : ಅಯ್ಯಪ್ಪ ದೇವಾಲಯಕ್ಕೆ ಸ್ತ್ರೀ ಪ್ರವೇಶ ವಿವಾದ ನಿರ್ಣಾಯಕ ಹಂತಕ್ಕೇರಿದ್ದು ಶಬರಿಮಲೆ ಸುತ್ತಮುತ್ತ ಬಿಗುವಿನ ವಾತಾವರಣ ಏರ್ಪಟ್ಟಿದೆ. ಪ್ರತಿಭಟನಾಕಾರರು ಮತ್ತು ಸರಕಾರದ ಮಧ್ಯೆ ಜಟಾಪಟಿ ನಡೆಯುವ ಸನ್ನಿವೇಶ ಸೃಷ್ಟಿಯಾಗಿದೆ.

ಇದೆ ಸಂದರ್ಭದಲ್ಲಿ ಕಾಲೇಜು ಹುಡುಗಿಯರು ಮತ್ತು ಮಹಿಳಾ ಪತ್ರಕರ್ತರನ್ನು ಪ್ರತಿಭಟನಾಕಾರರು ಬಸ್ಸಿನಿಂದ ಕೆಳಗೆ ಇಳಿಸಿದ ಪ್ರಸಂಗ ವರದಿಯಾಗಿದ್ದರೂ, ಅಯ್ಯಪ್ಪ ದರ್ಶನಕ್ಕೆ ಯಾವುದೇ ಭಕ್ತರಿಗೂ ಅಡ್ಡಿಯಾಗದಂತೆ ಸಂಪೂರ್ಣ ರಕ್ಷಣೆ ಒದಗಿಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ನ ತೀರ್ಪಿನ ಮರು ಪರಿಶೀಲನೆಗಾಗಿ ಅರ್ಜಿ ಸಲ್ಲಿಸುವುದಿಲ್ಲವೆಂದು ಹೇಳಿರುವ ಅವರು, ಲಿಂಗ ತಾರತಮ್ಯ ನೀತಿಯನ್ನು ಸರಕಾರ ಒಪ್ಪುವುದಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಏತನ್ಮಧ್ಯೆ ಟ್ರಾವಂಕೂರ್ ದೇವಸಂ ಮಂಡಳಿ ಪಂಡಲಂ ರಾಜಮನೆತನದ ಪ್ರತಿನಿಧಿಗಳು ಮತ್ತು ಅಯ್ಯಪ್ಪ ಸೇವಾ ಸಂಘದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದು, ಮೇಲ್ಮನವಿ ಸಲ್ಲಿಸುವ ಕುರಿತು ಪ್ರಬಲ ಅಭಿಪ್ರಾಯ ಒತ್ತಾಯ ಕೇಳಿಬಂದಿದೆ.

Leave a Reply