ಇದು ನಮ್ಮ ಊರು: ಭಾರತದಲ್ಲಿ ಲಾಕ್ ಡೌನ್ ತುಂಬಾ ಜನರ ಜೀವನವನ್ನು ಬದಲಿಸಿದೆ. ಈ ಲಾಕ್ ಡೌನ್ ಎಲ್ಲರಿಗೂ ಒಂದೊಂದು ಅನುಭವವನ್ನು ನೀಡಿದೆ. ಸಿನೆಮಾ ತಾರೆಯರು ಕೋರೋಣ ಭಯದಿಂದ ಮನೆಯಲ್ಲಿ ತಾವೇ ಸ್ವತಃ ಕೆಲಸ ಮಾಡುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ತುಂಬಾ ವೈರಲ್ ಆಗಿತ್ತು.

ಶಾರುಖ್ ಲಾಕ್‌ಡೌನ್‌ನಲ್ಲಿ ಆಹಾರವನ್ನು ತಯಾರಿಸುತ್ತಿದ್ದರು, ಹೊರಗಿನಿಂದ ಆರ್ಡರ್ ಮಾಡಲು ಹೆದರುತ್ತಿದ್ದರು ಎಂದು ಅವರ ಪತ್ನಿ ಗೌರಿ ಹೇಳಿದ್ದಾರೆ.

ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಸಂದರ್ಶನವೊಂದರಲ್ಲಿ, “ಲಾಕ್ ಡೌನ್ ಆರಂಭದಲ್ಲಿ, ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡಲು ಸಹ ನಾವು ಹೆದರುತ್ತಿದ್ದೆವು. ಆದ್ದರಿಂದ ಶಾರುಖ್ ಸ್ವತಃ ಮನೆಯಲ್ಲಿ ತಯಾರಿಸಿದ ಆಹಾರವನ್ನು … ನಾವು ಆನಂದಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

“ಅವರು ಆಹಾರ ತಯಾರಿಸಲು ಇಷ್ಟಪಡುತ್ತಾರೆ ಮತ್ತು ನಾನು ತಿನ್ನುವುದನ್ನು ಇಷ್ಟಪಡುತ್ತೇನೆ” ಎಂದು ಅವರು ಹೇಳಿದರು. ಶಾರುಖ್ ಕೊನೆಯ ಬಾರಿಗೆ 2018 ರಲ್ಲಿ ‘ಝೀರೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Leave a Reply