ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧ ದೆಹಲಿಯಲ್ಲಿ ಶಹೀನ್ ಬಾಗ್‌ನಲ್ಲಿ ಸುಮಾರು ಎರಡು ತಿಂಗಳಿನಿಂದ ಪ್ರತಿಭಟನೆ ನಿರಂತರ ನಡೆಯುತ್ತಾ ಇದೆ. ಮಾತ್ರವಲ್ಲ ಸುದ್ದಿಯ ಪ್ರಕಾರ, ದೆಹಲಿಯಿಂದ ನೋಯ್ಡಾ ಸಂಪರ್ಕಿಸುವ ಮಾರ್ಗವರನ್ನೂ ಪ್ರತಿಭಟನಾಕಾರರಿಂದ ಮುಚ್ಚಲ್ಪಟ್ಟಿದೆ. ಇದೀಗ ಶಾಹಿನ್ ಭಾಗ್ ನಿಂದ ಹಿಂದೂ ಮುಸ್ಲಿಂ ಐಕ್ಯತೆಯ ವಿಡಿಯೋವೊಂದು ವೈರಲ್ ಆಗಿದೆ. ಹಿಂದೂ ವ್ಯಕ್ತಿಯ ಶವ ಯಾತ್ರೆಗೆ ಪ್ರತಿಭಟನಾಕರಾರು ರಸ್ತೆ ತೆರವು ಗೊಳಿಸಿ ಸಹಕಾರ ಕೊಟ್ಟಿದ್ದಾರೆ. ಅಂತ್ಯ ಕ್ರಿಯೆ ಮೆರವಣಿಗೆಗೆ ದಾರಿ ಮಾಡಿಕೊಟ್ಟು ಮಾನವೀಯತೆಗೆ ಉದಾಹರಣೆ ಪ್ರದರ್ಶಿಸಿದರು.

ಶಾಹೀನ್ ಬಾಗ್ ಪ್ರದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಮೃತರ ಕುಟುಂಬ ಸದಸ್ಯರು ಪ್ರತಿಭಟನಾ ಸ್ಥಳವನ್ನು ತಲುಪಿದರು. ಮೃತ ದೇಹವನ್ನು ನೋಡಿದ ಪ್ರತಿಭಟನಾಕಾರರು ತಕ್ಷಣ ಮುಂದೆ ಬಂದು ಬ್ಯಾರಿಕೇಡ್ ತೆಗೆದು ಯಾವುದೇ ಸಂಭಾಷಣೆ ಇಲ್ಲದೆ ಮುಚ್ಚಿದ ರಸ್ತೆಯನ್ನು ತೆರೆದರು. ಬಳಿಕ ಶವಯಾತ್ರೆಯ ಜೊತೆ ನಡೆದರು.

ಪ್ರತಿಭಟನಾಕಾರರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗಿದೆ. ನಾವು ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ಅದಕ್ಕಾಗಿಯೇ ನಾವು ಮೃತ ದೇಹಕ್ಕೆ ದಾರಿ ಮಾಡಿಕೊಟ್ಟಿದ್ದೇವೆ ಎಂದು ಅಲ್ಲಿನ ಜನರು ಹೇಳಿದರು.

LEAVE A REPLY

Please enter your comment!
Please enter your name here