ಬರೇಲಿ : ಎಮ್ಮೆ ಕಳವು ಮಾಡಿದ್ದಾನೆ ಎಂಬ ಶಂಕೆಯ ಮೇಲೆ ಗುಂಪೊಂದು ಯುವಕನನ್ನು ಹೊಡೆದು ಸಾಯಿಸಿದೆ. ಉತ್ತರ ಪ್ರದೇಶದ ಭೋಲಾಪುರ್ ಹಾಡೋಲಿಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಾರುಖ್ (20) ಗುಂಪಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ದುರ್ದೈವಿ. ಈ ವರಗೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಅಭಿನಂದನ್ ಹೇಳಿದ್ದಾರೆ.

ಶಾರುಖ್ ಹಾಗೂ ಆತನ ಮೂವರು ಸ್ನೇಹಿತರನ್ನು ತಡೆದ ಗುಂಪು ಅವರು ಎಮ್ಮೆ ಕಳವು ಮಾಡಲು ಬಂದಿದ್ದಾರೆ ಎಂದು ಅನುಮಾನಿಸಿ ಹಲ್ಲೆ ಮಾಡಲು ತೊಡಗಿದರು. ಈ ವೇಳೆ ಇತರ ಮೂವರು ತಪ್ಪಿಸಿಕೊಂಡಿದ್ದು, ತೀವ್ರ ಗಾಯಗೊಂಡ ಶಾರುಖ್ ನನ್ನ ಹತ್ತಿರದ ಆಸ್ಪತ್ರೆಗೆ ಸಾಗಿಸಲಾದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ಪೆಟ್ಟು ಬಿದ್ದ ಪರಿಣಾಮವಾಗಿ ಶಾರುಖ್ ಮೃತ ಪಟ್ಟಿರುವುದಾಗಿ ಮರಣೋತ್ತರ ವರದಿ ತಿಳಿಸಿದೆ. ಸುಮಾರು 25-30 ಮಂದಿ ಹಲ್ಲೆ ಮಾಡುವಲ್ಲಿ ಇದ್ದರು ಎಂದು ಶಾರುಖ್ ಸೋದರ ದೂರಿನಲ್ಲಿ ಹೇಳಿದ್ದಾರೆ. ಮೂವತ್ತು ಸ್ಥಳೀಯರ ಮೇಲೆ ಕೇಸು ದಾಖಲಾಗಿದ್ದು, ಎರಡೂ ಕಡೆಯವರಿಂದ ಎಫ್ ಐ ಆರ್ ದಾಖಲಾಗಿದೆ. ಶಾರುಖ್ ಹಲವು ವರ್ಷಗಳಿಂದ ತನ್ನ ಅಂಕಲ್ ಜೊತೆ ದುಬೈಯಲ್ಲಿ ದುಡಿಯುತ್ತಿದ್ದು, ಇತ್ತೀಚೆಗಷ್ಟೇ ಊರಿಗೆ ಹಿಂದಿರುಗಿದ್ದನು. ರಾತ್ರಿ ಸ್ನೇಹಿತರ ಜೊತೆ ತಿರುಗಬೇಡ ಎಂದು ಪದೇ ಪದೇ ತಾಯಿ ಎಚ್ಚರಿಕೆ ಕೊಟ್ಟಿದ್ದರು ಎಂದು ಮೃತನ ಸಹೋದರ ಹೇಳಿದ್ದಾರೆ.

Leave a Reply