ಹೆಬ್ಬೆರಳಿನಲ್ಲಿ ಗಾಯವಾದ ಕಾರಣದಿಂದ ಭಾರತದ ಓಪನಿಂಗ್ ಬ್ಯಾಟ್ಸಮನ್ ಶಿಖರ್ ಧವನ್ 3 ವಾರಗಳ ಕಾಲ ವಿಶ್ವಕಪ್ ನಿಂದ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧವನ್ ರವರ ಹೆಬ್ಬೆರಳು ಮುರಿತವಾಗಿದ್ದು, ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಚೆಂಡನ್ನು ಎದುರಿಸುವಾಗ ಅವರಿಗೆ ಗಾಯವಾಗಿದೆ.
ಅದರ ಬಳಿಕ ಶಿಖರ್ ಧವನ್ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಇಳಿಯಲಿಲ್ಲ.

ಅಕ್ಟೋಬರ್ 20,2010 ರಲ್ಲಿ ವಿಶಾಖಪಟ್ಟನಮ್‍ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಮಾರ್ಚ 14, 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ಕೇವಲ 174 ಎಸೆತಗಳಲ್ಲಿ 187 ರನ ಬಾರಿಸಿದ್ದರು. ಜೂನ್ 4, 2011 ರಂದು ಟ್ರಿನಿಡ್ಯಾದ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು.

 

Leave a Reply