ಸಾಗರ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಾಜಕೀಯ ಶಿಷ್ಟಾಚಾರವನ್ನು ಕೊನೆಗೊಳಿಸಿದ್ದಾರೆಂದು ಆರೋಪಿಸಿದ್ದಾರೆ. ದೇಶದಲ್ಲಿ ವೈಚಾರಿಕವಾಗಿ ನಾವು ಹೋರಾಟ ಮಾಡುತ್ತೇವೆ. ಆದರೆ ವಿದೇಶಕ್ಕೆ ಹೋಗಿ ನಮ್ಮ ಪರಂಪರೆಯನ್ನು ನಾಶ ಮಾಡುವ ಕೆಲಸವನ್ನು ಎಂದೂ ಮಾಡಿಲ್ಲ ಎಂದು ಅವರು ಹೇಳಿದರು.

ಚೌಹಾನ್ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತಾಡುತ್ತಾ ಕಾಂಗ್ರೆಸ್ ಆರೋಪ-ಪ್ರತ್ಯಾರೋಪಗಳ ರಾಜಕೀಯದಲ್ಲಿ ತಲ್ಲೀನವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಪ್ರಧಾನಿ ನರೇಂದ್ರಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಬಿಜೆಪಿಯ ವಿರುದ್ಧ ಸತ್ಯಕ್ಕೆದೂರವಾದ ಆರೋಪ ಮಾಡಿದ್ದಾರೆ. ಆದರೆ ನಾವು ದೇಶದೊಳಗೆ ವೈಚಾರಿಕವಾಗಿ ಹೋರಾಡುತ್ತೇವೆ. ವಿದೇಶದಲ್ಲಿ ಹೋಗಿ ಅವಹೇಳನ ಮಾಡುವ ಪರಂಪರೆ ನಮಗಿಲ್ಲ ಎಂದು ರಾಹುಲ್ ಗಾಂಧಿಯನ್ನು ಚೌಹಾನ್ ಕುಟುಕಿದರು.

ವಾಶಿಂಗ್ಟನ್‍ಗೆ ಒಮ್ಮೆ ತಾನುಹೋಗಿದ್ದೆ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಪತ್ರಕರ್ತರು ನಿಮ್ಮ ಪ್ರಧಾನಿ ಅಂಡರ್ ಅಚೀವರ್ ಎಂದು ಹೇಳಿದ್ದರು. ಕೂಡಲೇ ಅವರನ್ನು ತಿದ್ದಿ ಭಾರತದ ಪ್ರಧಾನಿ ಕಡಿಮೆ ಸಾಧನೆಮಾಡಿದ ವ್ಯಕ್ತಿ(ಅಂಡರ್ ಅಚೀವರ್) ಆಗಲು ಸಾಧ್ಯವಿಲ್ಲ ಅವರು ಯಾವುದೇ ಪಾರ್ಟಿಯ ಪ್ರಧಾನಿಯಲ್ಲ, ನಮ್ಮ ಪ್ರಧಾನಿಯೆಂದು ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದೆ ಎಂದು ಶಿವರಾಜ್ ಸಿಂಗ್ ಚೌಹಾನ್ ಹೇಳಿದರು.

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಕಾಂಗ್ರೆಸ್ ನಿರಂತರ ಟೀಕಿಸುವುದನ್ನು ಬೆಟ್ಟು ಮಾಡಿದ ಮುಖ್ಯಮಂತ್ರಿ ಆಪಾರ್ಟಿಯಲ್ಲಿ ವೈಚಾರಿಕವಾಗಿ ವಿರೋಧಿಸುವ ಸಂಸ್ಕೃತಿ ಕೊನೆಗೊಂಡಿರುವಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಪಾರ್ಟಿಯೊಳಗೆ ನಾಯಕರು ಒಬ್ಬರ ವಿರುದ್ಧ ಹೋರಾಡುತ್ತಿದ್ದಾರೆ. ಆದ್ದರಿಂದ ಈ ಪಾರ್ಟಿ ಮುಂದೆ ಏನಾಗಬಹುದೋ ಎಂದು ಗೊತ್ತಿಲ್ಲ ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ಮೊದಲು ಕೂಡ ಚುನಾವಣೆ ನಡೆದಿದೆ. ಆದರೆ ಆಗೆಲ್ಲ ಅಭದ್ರ ರೀತಿಯ ಆರೋಪ ಹೊರಿಸಲಾಗುತ್ತಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಸ್ಪರ್ಧೆ ಮತ್ತು ವೈಚಾರಿಕ ಭಿನ್ನಮತ ಇರುತ್ತದೆ. ಮಧ್ಯಪ್ರದೇಶದಲಿ ್ಲ ಸಂಸ್ಕಾರ ಮತ್ತು ಸಂಸ್ಕøತಿ ಮರೆತು ರಾಜಕೀಯ ನಡೆದಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಗಳಿಸಲಿಕ್ಕಾಗಿ ಇವೆರಡನ್ನೂ ಮರೆತಿದೆ. ಕಾಂಗ್ರೆಸ್ ಕೆಲವೊಮ್ಮೆ ತನ್ನವಿರುದ್ಧ ಕೆಟ್ಟ ಪದಗಳನ್ನು ಬಳಸುತ್ತಿದೆ. ಮಧ್ಯಪ್ರದೇಶದ ಜನರು ಕಾಂಗ್ರೆಸ್‍ನ ಈ ಋಣಾತ್ಮಕ ಮಾನಸಿಕತೆಗೆ ಉತ್ತರ ನೀಡಲಿದ್ದಾರೆ ಎಂದು ಚೌಹಾನ್ ಹೇಳಿದರು.

Leave a Reply