ಪಾಟ್ನ: ಪಾಟ್ನದಲ್ಲಿ ಜೆಡಿಯು ಯುವ ವಿಭಾಗದ ಸಮ್ಮೇಳನದಲ್ಲಿ ಮಾತಾಡುತ್ತಿದ್ದಾಗ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ಗೆ ಚಪ್ಪಲಿ ಎಸೆಯಲಾಗಿದೆ. ಸಭೆಯಲ್ಲಿದ್ದ ಚಂದನ್ ಕುಮಾರ್ ಶೂ ಎಸೆದಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಔರಂಗಬಾದ್‍ನ ಚಂದನ್ ಶರ್ಮ ಮುಖ್ಯಮಂತ್ರಿ ಭಾಷಣ ಮಾಡುವ ವೇಳೆ ಶೂ ಎಸೆದರು. ಕೂಡಲೇ ಜೆಡಿಯು ಕಾರ್ಯಕರ್ತರ ಗುಂಪು ಚಂದನ್‍ನನ್ನು ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಚಂದನ್‍ರನ್ನು ರಕ್ಷಿಸಿದರು.

ಉನ್ನತ ಜಾತಿಗೆ ಸೇರಿದ ತನಗೆ ಉದ್ಯೋಗ ಸಿಕ್ಕಿಲ್ಲ. ಮೀಸಲಾತಿಯಲ್ಲಿರುವ ಆಕ್ರೋಶ , ಪ್ರತಿಭಟನೆ ಶೂ ಎಸೆತಕ್ಕೆ ಪ್ರೇರಣೆಯಾಗಿದೆ ಎಂದು ನಂತರ ಪೊಲೀಸರಿಗೆ ಚಂದನ್ ಕುಮಾರ್ ಹೇಳಿಕೆ ನೀಡಿದರು. ನಿತೀಶ್ ಕುಮಾರ್‍ಗೆ ಚಪ್ಪಲಿ ಎಸೆತದ ಘಟನೆ ನಡೆಯುವುದು ಇದು ಮೊದಲ ಸಲವೇನಲ್ಲ. 2016ರಲ್ಲಿ ಕೂಡ ಇಂಥ ಘಟನೆ ನಡೆದಿತ್ತು. ನಿತೀಶ್‍ಗೆ ಶೂ ಎಸೆದ ಆರೋಪದಲ್ಲಿ ಪಿ.ಕೆ. ರಾಯ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.

Leave a Reply