ನಿನ್ನೆ ಬಾರತ ಪಾಕಿಸ್ತಾನ ಪಂದ್ಯದ ನಡುವೆ ನಡೆದ ಪಂದ್ಯದ ನಡುವೆಯೊಂದು ಸ್ವಾರಸ್ಯಕರವಾದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೀಲ್ಡಿಂಗ್ ಮಾಡುತ್ತಿದ್ದ ಶೋಯೆಬ್ ಮಲಿಕ್ ರನ್ನುದ್ದೇಶಿಸಿ ಮಲಯಾಳಿ ವೀಕ್ಷಕರು “ಮಲಿಕ್ ಪುದಿಯಾಪಿಳೆ” (ಮಾಲಿಕ್ ಮದುಮಗ) ಎಂದು ಕರೆದು ಗಮನ ಸೆಳೆದಾಗ ಅವರು ಹಿಂತಿರುಗಿ ನೋಡಿದ ದೃಶ್ಯ ಮಲಯಾಳಿ ಅಭಿಮಾನಿಗಳ ಪ್ರೀತಿಯ ಪ್ರಕಟ ಎಂಬ ತಲೆಬರಹದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶೋಯೆಬ್ ಮಲಿಕ್ ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ನಡೆಸುತ್ತಿದ್ದರು.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ನಡುವೆ ನಡೆದ ವಿವಾಹ ಬಾರೀ ವಿವಾದವೆಬ್ಬಿಸಿತ್ತು. ಆದರೆ ಇದು ಭಾರತೀಯರು ಈಗಲೂ ಶೋಯೆಬ್ ಮಲಿಕ್ ರನ್ನು ಭಾರತೀಯ ಅಳಿಯನಾಗಿ ಕಾಣುತ್ತಿದ್ದಾರೆಂಬುದರ ಸಣ್ಣ ಉದಾಹರಣೆಯಾಗಿದೆ.