ಬಳ್ಳಾರಿ : ಶ್ರೀರಾಮುಲು ಮೊದಲು ಕಾಂಗ್ರೆಸಿಗರಾಗಿದ್ದರು. ಒಮ್ಮೆ ಕಾಂಗ್ರೆಸ್ ನಿಂದ ಪಾಲಿಕೆ ಸದಸ್ಯರಾಗಿ ಆಯ್ಕೆ ಸಹ ಆಗಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳಿದರು,
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಶ್ಮಾ ಸ್ವರಾಜ್ ಬಳ್ಳಾರಿಗೆ ಬರುವವರೆಗೆ ರಾಮುಲು ಕಾಂಗ್ರೆಸ್‌ನಲ್ಲೇ ಇದ್ದರು. ಸುಶ್ಮಾ ಸ್ವರಾಜ್ ಬಳ್ಳಾರಿಗೆ ಬರಲು ಆರಂಭಿಸಿದ ನಂತರ ಅವರು ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದರು ಎಂದರು.
ಅವರೇ ಹೇಳುವಂತೆ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನ ತಂದಿದ್ದಾರೆ. ಅನುದಾನದಲ್ಲಿ ಕೆಲಸ ಮಾಡಿದ್ದಾರೆ. ಇಟ್ಟುಕೊಂಡಿದ್ದಾರೆ ಸಹ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಕುಟುಕಿದರು.
ಬಳ್ಳಾರಿ ಜಿಲ್ಲೆಗೆ ನಮ್ಮ ಸರ್ಕಾರದ ಕೊಡುಗೆಗಳು ಅಪಾರವಾಗಿವೆ. ಬಳ್ಳಾರಿ ಜಿಲ್ಲೆ ಬಗ್ಗೆ ಮಾತನಾಡುವವರು ಜಿಲ್ಲೆ ಬಿಟ್ಟು ಯಾಕೆ ಪಕ್ಕದ ಜಿಲ್ಲೆಗೆ ಹೋದರು ಎಂದು ಪ್ರಶ್ನಿಸಿದರು. ನಮ್ಮ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರಿಗೆ ರಾಜಕೀಯ ಇತಿಹಾಸವಿದೆ ಎಂದರು.