ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರ ಕರ್ನಾಟಕ ಭೇಟಿಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಸಿ.ಎಂ. ಸಿದ್ದರಾಮಯ್ಯ, ಕರ್ನಾಟಕದಲ್ಲಿ ಬೆಂಕಿ ಹಚ್ಚಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಸುಲಭದಲ್ಲಿ ನಾವು ಬಿಡುವುದಿಲ್ಲ. ಅವರು ಬೆಂಕಿ ಹಚ್ಚಿದ ಕೂಡಲೇ ನಾವು ಅದನ್ನು ನಂದಿಸುತ್ತೇವೆ’ ಎಂದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಗಲಭೆ ನಡೆಸಲು ಅಮಿತ್‌ ಷಾ ಸೂಚಿಸಿದ್ದರೆಂದು ಸಂಸದ ಪ್ರತಾಪ್‌ ಸಿಂಹ ಈ ಹಿಂದೆ ಹೇಳಿಕೆ ಕೊಟ್ಟಿದ್ದರು. ಒಬ್ಬ ರಾಜಕಾರಣಿ ಸಮಾಜದಲ್ಲಿ ಸಾಮರಸ್ಯವಿರಬೇಕೆಂದು ಬಯಸಬೇಕು. ಸಾಮರಸ್ಯ ಹಾಳುಮಾಡುವಂತೆ ಹೇಳುವವರು ರಾಜಕಾರಣಿಗಳಲ್ಲ. ಅವರು ನನ್ನ ಪ್ರಕಾರ ಮನುಷ್ಯರೇ ಅಲ್ಲ’ ಎಂದು ವಾಗ್ದಾಳಿ ನಡೆಸಿದರು.

Leave a Reply