ಅಮೃತಸರ: ಸ್ಥಳೀಯಾಡಳಿತ ಮತ್ತು ಪ್ರವಾಸೋದ್ಯಮ ಸಚಿವ ನವಜೋತ್ ಸಿಂಗ್ ಸಿಧು ಅಮೃತಸರದಲ್ಲಿ ಶುಕ್ರವಾರದಂದು ನಡೆದಿದ್ದ ರೈಲು ದುರಂತದಲ್ಲಿ ಬಲಿಯಾದ ಕುಟುಂಬಗಳು ಮತ್ತು ಅನಾಥ ಮಕ್ಕಳ ಜವಾಬ್ದಾರಿಯನ್ನು ಹೊರಲು ಮುಂದೆ ಬಂದಿದ್ದಾರೆ. ಈ ಕುರಿತು ಪತ್ರಿಕಾಗೊಷ್ಠಿ ನಡೆಸಿದ ಅವರು ಈ ದುರಂತದಿಂದಾಗಿ ಅನಾಥರಾಗಿರುವ ಎಲ್ಲ ಮಕ್ಕಳನ್ನು ದತ್ತು ಪಡೆಯುತ್ತಿರುವುದಾಗಿ ಅವರು ಘೋಷಿಸಿದರು.
ಎಷ್ಟು ಮಕ್ಕಳು ಅನಾಥರಾಗಿದ್ದಾರೆ. ಅವರೆಲ್ಲರೂ ನನ್ನ ಕುಟುಂಬ ವಾಗಿದ್ದಾರೆ ಎಂದು ಸಚಿವ ನವಜೋತ್ ಸಿಂಗ್ ಸಿಧು ಹೇಳಿದರು.
ಶುಕ್ರವಾರ ಅಮೃತಸರ ಜೋಡಾ ಫಾಟಕ್ ಸಮೀಪ ದಸರೆ ಮಹೋತ್ಸಾವಾಚರಣೆಯಲ್ಲಿ ರಾವಣನ ಬೊಂಬೆ ಉರಿಯುತ್ತಿರುವುದನ್ನು ರೈಲು ಹಳಿಯ ಮೇಲೆ ನಿಂತು ನೋಡುತ್ತಿದ್ದವರ ಮೇಲೆ ರೈಲು ಹರಿದು ಹೋಗಿತ್ತು. ಈ ದುರ್ಘಟನೆಯಲ್ಲಿ ಅರುವತ್ತು ಮಂದಿ ಬಲಿಯಾಗಿದ್ದರು. ಹಲವಾರು ಮಂದಿ ಗಾಯಗೊಂಡಿದ್ದರು.