ಸಿಖ್ ಸಮುದಾಯದ ಸದಸ್ಯರಿಗೆ ಶಾಹಿದಿ ಜೋರ್ ಮೇಲಾಗಾಗಿ ‘ಲಂಗಾರ್’ (ಸಮುದಾಯ ಅಡುಗೆ) ಅನ್ನು ತಯಾರಿಸಲು ಫತೇಘರ್ ಸಾಹಿಬ್ನಲ್ಲಿರುವ ಮುಸ್ಲಿಮರು ಐತಿಹಾಸಿಕ ಲಾಲ್ ಮಸೀದಿ ಆವರಣವನ್ನು ತೆರೆದು
ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಗುರು ಗೋಬಿಂದ್ ಸಿಂಗ್ ಹುತಾತ್ಮತೆಯ ನೆನಪಿಗಾಗಿ ಮೂರು ದಿನ ಇದನ್ನು ಆಚರಿಸಲಾಗುತ್ತಿದೆ. ಮಸೀದಿಯು ಮೊಘಲ್ ಕಾಲಕ್ಕೆ ಸೇರಿದೆ. ಶೇಖ್ ಅಹ್ಮದ್ ಫಾರೂಕಿ ಸಿರ್ಹಿಂದಿ (1560-1623) ಮುಜದ್ದಿದ್ ಅಲ್ಫ್ ಸನಿ ಎಂದು ಕರೆಯಲ್ಪಡುವ ಮೊಮ್ಮಗನಾದ ಸೈಫುದ್ದೀನ್ ರಿಗೆ ಅರ್ಪಿಸಲಾಗಿದೆ. ಎರಡು ವರ್ಷಗಳ ಹಿಂದೆ ಈ ಮಸೀದಿಯನ್ನು ಮುಸ್ಲಿಂ ಸಮುದಾಯವು ನವೀಕರಿಸಿತ್ತು.

“ಮುಸ್ಲಿಂ ಸಮುದಾಯವು ತಮ್ಮ ಮಸೀದಿಯ ಜಾಗವನ್ನು ಬಿಟ್ಟು ಕೊಟ್ಟಿದೆ. ಕಳೆದ ಮೂರು ದಿನಗಳಿಂದ ನಾವು ಆಹಾರವನ್ನು ತಯಾರಿಸಿ ಸಂದರ್ಶಕರ ಸೇವೆ ಮಾಡುತ್ತಿದ್ದೇವೆ. ಮಸೀದಿಯ ನೆಲಮಾಳಿಗೆಯನ್ನು ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಬಳಸುತ್ತೇವೆ. ಎರಡು ಹಳ್ಳಿಗಳ ಗುರುದ್ವಾರಗಳು ಒಟ್ಟಾಗಿ ಸಂಘಟಿಸಿರುವ ಲ್ಯಾಂಗರ್ ಇದಾಗಿದೆ. ನಮ್ಮ ಧಾರ್ಮಿಕ ಕಾರ್ಯಕ್ಕೆ ಮುಸ್ಲಿಮರು ತಮ್ಮ ಭೂಮಿಯನ್ನು ನೀಡಿದ್ದು, ಮಸೀದಿಯ ಉಸ್ತುವಾರಿಯಿಂದ ನಮಗೆ ಅನುಮತಿ ಸಿಕ್ಕಿದೆ “ಎಂದು ರಾಣವಾನ್ ಗ್ರಾಮದ ಚರಣಿತ್ ಸಿಂಗ್ ಚನ್ನಿ ಹೇಳುತ್ತಾರೆ.

Leave a Reply