* ವಧು-ವರರ ಆಯ್ಕೆಯಲ್ಲಿ ಆದರ್ಶ, ಸಮಾನತೆಗೆ ಆದ್ಯತೆ ನೀಡಬೇಕು.

* ಬಹಿರಂಗವಾಗಿ ಅಥವಾ ಗೌಪ್ಯ ವಾಗಿ ಉಡುಗೆ ಅಥವಾ ವರದಕ್ಷಿಣೆ ಆಪೇಕ್ಷಿಸಬಾರದು.

* ವರದಕ್ಷಿಣೆ ಬೇಡುವವರೊಂದಿಗೆ ವಿವಾಹ ಸಂಬಂಧ ಮಾಡಬಾರದು.

* ನಿಶ್ಚಿತಾರ್ಥದ ಹೆಸರಿನಲ್ಲಿ ಇಲ್ಲಸಲ್ಲದ ವೆಚ್ಚ ಮಾಡಬಾರದು ಮತ್ತು ಮಾಡಿಸಲೂ ಬಾರದು.

* ವಿವಾಹದ ಆಹ್ವಾನಕ್ಕಾಗಿ ಫೋನ್ , ಎಸ್ಸೆಮ್ಮೆಸ್ಸ್, ಈಮೇಲ್… ಇತ್ಯಾದಿ ಯನ್ನು ಉಪಯೋಗಿಸಬೇಕು.
ಮದುವೆ ಕಾರ್ಡ್‍ಗಾಗಿ ದುಂದು ವೆಚ್ಚ ಮಾಡಬಾರದು.

* ವಿವಾಹದ ಸಮಾರಂಭದಲ್ಲಿ ಪಾಲ್ಗೊಳ್ಳಲು ವರನ ಕಡೆಯಿಂದ ಸೀಮಿತ ಬಂಧುಗಳು ಮಾತ್ರ ಹೋಗಬೇಕು.

* ವಿವಾಹವು ಮಧ್ಯಾಹ್ನ ಅಥವಾ ರಾತ್ರಿ ಇರುವುದಾದರೆ ವರನ ಪಕ್ಷದವರು ತಮ್ಮ ಉಪಹಾರದ ವ್ಯವಸ್ಥೆ ತಾವೇ ಮಾಡಿಕೊಳ್ಳಬೇಕು.

* ಯಾವುದೇ ಧಾರ್ಮಿಕ ಕಾರ್ಯ ಕ್ರಮ, ಸಭೆಗಳಲ್ಲಿ ಸಾಮೂಹಿಕ ವಿವಾಹಗಳ ವ್ಯವಸ್ಥೆ ಮಾಡಬಹುದು. ಇವುಗಳನ್ನು ಕಾರ್ಯರೂಪಕ್ಕೆ ತರಲು ಒಟ್ಟು ಸಮಾಜದ ಸ್ತ್ರೀ-ಪುರುಷರು ವಿಶೇಷತಃ ಶ್ರೀಮಂತ ವರ್ಗದ ಸಹಕಾರ ಅಗತ್ಯ.

*ಸರಳ ವಿವಾಹವನ್ನು ಪ್ರತಿಪಾದಿಸುವವರು ಮೊದಲು ಮಾದರಿಯಾಗಬೇಕು. ಸರಳ ವಿವಾಹದಿಂದ ಉಳಿಸಿದ ಹಣವನ್ನು ಉತ್ತಮ ಸಮಾಜ ಮುಖಿ ಶಿಕ್ಷಣದಂತಹ ಕಾರ್ಯಗಳಿಗೆ ವ್ಯಯಿಸಬೇಕು.

LEAVE A REPLY

Please enter your comment!
Please enter your name here