676901063

ನವದೆಹಲಿ: ಮನೆಯಲ್ಲೇ ಇದ್ದು ಬೇಸರವಾಗಿರುವ ಕಾರಣದಿಂದಲೋ, ಏಕತಾನತೆಯಿಂದಲೋ ತಂಬಾಕು ಮತ್ತು ಮದ್ಯವನ್ನು ಬಳಸಿದರೆ ನಿಮ್ಮ ರೋಗ ಪ್ರತಿರೋಧಕ ಶಕ್ತಿ ಕುಸಿಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ಒತ್ತಡದಿಂದಾಗಿ ಪರ್ಯಾಯ ಮಾರ್ಗಗಳ ವ್ಯಸನ ಹೊಂದಿರುವವರು ಈ ವೇಳೆ ವೃತ್ತಿಪರರ ಮಾರ್ಗದರ್ಶನ ಪಡೆಯುವುದು ಒಳಿತು ಎಂದಿದೆ.

ಮಂಗಳವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಆರೋಗ್ಯ ಸಚಿವಾಲಯ ಜೊತೆಗೆ, ಸೋಂಕಿತರನ್ನು ಬಹಿಷ್ಕರಿಸುವುದಾಗಲೀ ನಿಂದಿಸುವುದಾಗಲೀ ಮಾಡಬಾರದು. ಯಾರಿಗಾದರೂ ಸೋಂಕು ತಗುಲಿರುವ ಶಂಕೆಯಿದಲ್ಲಿ ಅವರಿಗೆ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವೊಲಿಸಿ, ಅಗತ್ಯವಿದ್ದಲ್ಲಿ ವೈದ್ಯಕೀಯ ಸೇವೆ ಪಡೆಯುವ ಬಗ್ಗೆ ವಿವರಣೆ ನೀಡಿ, ಈ ಸಮಯದಲ್ಲಿ ನಮ್ಮ ಮನಸಿನ ನಿಯಂತ್ರಣ ಕಾಯ್ದುಕೊಳ್ಳುವುದು ಅತ್ಯವಶ್ಯ ಎಂದು ಹೇಳಿದೆ. ಲಾಕ್‌ ಡೌನ್‌ನ ಮಹತ್ವವನ್ನು ಒತ್ತಿ ಹೇಳಿರುವ ಸಚಿವಾಲಯ, ನಮ್ಮನ್ನು ಹಾಗೂ ಇತರರನ್ನು ಕ್ಷೇಮವಾಗಿಡುವ ಸಲುವಾಗಿ ಸಾಮಾಜಿಕ ಆಂತರ ಅನಿವಾರ್ಯ. ಹೊರಗೆ ತಿರುಗುವ ಅಭ್ಯಾಸವನ್ನು ಕಡಿಮೆ ಮಾಡಿ, ಸಾಧ್ಯವಾದಷ್ಟೂ ಗುಂಪುಗಳಿಂದ ದೂರವಿರಿ. ತೀವ್ರ ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದಾಚೆ ಕಾಲಿಡಿ ಎಂದಿದೆ.

LEAVE A REPLY

Please enter your comment!
Please enter your name here