ಚೆಂಬೂರ್(ಮಹಾರಾಷ್ಟ್ರ): ಕೋರ್ಟಿನ ಕೊಠಡಿಯಲ್ಲಿ ನ್ಯಾಯಾಧೀಶರಿಗೆ ಹಾವೊಂದು ಕಚ್ಚಿದೆ. ನಿನ್ನೆ ಚೆಂಬೂರಿನ ಜ್ಯುಡಿಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟಿನಕೋಣೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಇಲ್ಲಿನ ಜ್ಯುಡಿಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಸಿ.ಪಿ. ಕಾಶಿದ್ ಎಂಬವರಿಗೆ ಹಾವು ಕಚ್ಚಿತ್ತು. ನಿನ್ನೆ ನ್ಯಾಯಾಧೀಶರು ಛೇಂಬರ್‍ನಲ್ಲಿ ಕೂತಿದ್ದರು. ಆಗ ಅವರನ್ನು ಹಾವು ಕಚ್ಚಿತು. ಆದರೆ ಇದು ವಿಷಪೂರಿತ ಹಾವಲ್ಲ ಎಂದು ವರದಿಯಾಗಿದೆ.
ನ್ಯಾಯಾಧೀಶರ ಎಡಗೈಗೆ ಹಾವು ಕಚ್ಚಿದ ಕೂಡಲೇ ಪನವೇಲ್ ಸಬ್ ಡಿವಿಷನ್ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಅಲ್ಲಿಂದ ಅವರು ಗಾಂಧಿ ಆಸ್ಪತ್ರೆಗೆ ತೆರಳಿದ್ದರು. ನಿನ್ನೆ ಸಂಜೆಯ ವೇಳೆಚಿಕಿತ್ಸೆ ಪಡೆದು ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಹಾವಾಡಿಗರನ್ನು ಕರೆಸಿಕೊಂಡು ಹಾವನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಚೆಂಬೂರಿನ ಕೋರ್ಟು-2ರಲ್ಲಿ ಘಟನೆ ನಡೆದಿತ್ತು. ಕೋರ್ಟು ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಕೋರ್ಟು ಸಮುಚ್ಚಯದಲ್ಲಿನ ಒಂದು ಪಾಶ್ರ್ವವನ್ನು ಅಶೋಕ್‍ಬಾಗ್‍ನ ಹೊಸಕಟ್ಟಡಕ್ಕೆ ಈಗಾಗಲೇ ಸ್ಥಳಾಂತರಿಸಲಾಗಿದೆ.