ಖ್ಯಾತ ದಾರ್ಶನಿಕ ಸಾಕ್ರೆಟಿಸ್‍ನ ಪತ್ನಿ ಸಾಂತಿಪ್ಪೆ ಕೋಪಿಷ್ಠೆ ಮತ್ತು ಕ್ರೂರ ಸ್ವಭಾವದವಳಾಗಿದ್ದಳು. ಪತಿಯ ಮಹತ್ವವನ್ನು ಅರಿಯಲು ಸಾಂತಿಪ್ಪೆಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಆಕೆ ಯಾವಾಗಲೂ ಪತಿಗೆ ಕೀಟಲೆ ಕೊಟ್ಟು ಅವರ ನೆಮ್ಮದಿ ಕೆಡಿಸುತ್ತಿದ್ದಳು.

ಒಮ್ಮೆ ಸಾಂತಿಪ್ಪೆ ಪತಿಯನ್ನು ತೀವ್ರವಾಗಿ ಆಕ್ಷೇಪಿಸಿ ಕಠಿಣವಾಗಿ ತರಾಟೆಗೆ ತೆಗೆದು ಕೊಂಡಳು. ಆದರೂ ಸಾಕ್ರೆಟಿಸ್ ಕೋಪಗೊಳ್ಳಲಿಲ್ಲ. ಪತ್ನಿಯ ಮತ್ಸರ ಮತ್ತಷ್ಟು ಹೆಚ್ಚಿತು. ಆಕೆ ಒಳಗೆ ಹೋಗಿ ಒಂದು ಪಾತ್ರೆಯಲ್ಲಿ ಕೊಳಕು ನೀರು ತಂದು ಸಾಕ್ರೆಟಿಸನ ತಲೆಗೆ ಸುರಿದಳು. ಆದರೂ ಅವರು ಏನು ನಡೆದಿಲ್ಲವೆಂಬಂತೆ ವರ್ತಿಸಿದರು. ಆಗ ಸಾಂತಿಪ್ಪೆ ಸೋಲೊಪ್ಪಿಕೊಳ್ಳಬೇಕಾಯಿತು.

ಕೊಳಕು ನೀರಿನಿಂದ ತೊಯ್ದು ಹೋಗಿದ್ದ ಸಾಕ್ರೆಟಿಸ್ ನಗುತ್ತಾ ಹೀಗೆಂದರು- “ನಲ್ಲೆ! ನಿನ್ನ ಅಟ್ಟಹಾಸವು ಗುಡುಗಿಗೆ ಸಮಾನವಾಗಿತ್ತು. ಗುಡುಗಿನ ನಂತರ ಚೆನ್ನಾಗಿ ಮಳೆಯಾಗಬೇಕು. ಈ ಮಳೆ ಬಾರದಿದ್ದರೆ ಆಶ್ಚರ್ಯವಾಗುತ್ತಿತ್ತು.”

Leave a Reply