ಪೆಂಗ್ವಿನ್‍ಗಳು ಅಂಟಾರ್ಟಿಕದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇವುಗಳಲ್ಲಿ 18 ಜಾತಿಗಳಿವೆ. ಅತೀ ಸಣ್ಣ ಜಾತಿಯು ನ್ಯೂಜಿಲಾಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಲಿಟಲ್ ಬ್ಲೂ ಪೆಂಗ್ವಿನ್ ಎಂದು ಕರೆಯಲಾಗುತ್ತದೆ. ಈ ದೇಶಗಳಲ್ಲಿ ವಾಸಿಸುವ ಜನರ ಮನೋರಂಜನೆಯ ಸಾಧನಗಳಾಗಿ ಮಾರ್ಪಟ್ಟಿವೆ ಈ ಲಿಟಲ್ ಬ್ಲೂ ಪೆಂಗ್ವಿನ್‍ಗಳು. ಇದೇ ಕಾರಣದಿಂದ ಪೆಂಗ್ವಿನ್‍ಗಳು ಮಕ್ಕಳಿಗೆ ಭಾರೀ ಇಷ್ಟದ ಪಕ್ಷಿಯಾಗಿದೆ.
ಪೆಂಗ್ವಿನ್ ಹಕ್ಕಿಯಾದರೂ ಹಾರುವುದಿಲ್ಲ. ಕಾರಣ ಇದರ ರೆಕ್ಕೆಗಳು ಶರೀರದ ಭಾರವನ್ನು ಎತ್ತಲು ಸಹ ಕರಿಸುವುದಿಲ್ಲ. ಇದು ಹಾರದಿರಲು ಇನ್ನೊಂದು ಕಾರಣವೆಂದರೆ ಇದರ ಇಷ್ಟದ ಆಹಾರ ಸುಲಭದಲ್ಲಿ ಸಿಗುತ್ತದೆ. ಆದ್ದರಿಂದ ಇತರ ಹಕ್ಕಿಗಳ ತರಹ ದೂರ-ದೂರದವರೆಗೆ ಆಹಾರ ಕ್ಕಾಗಿ ಹಾರಿ ಹುಡುಕಾಡಬೇಕೆಂದಿಲ್ಲ. ಪೆಂಗ್ವಿನ್‍ಗಳು ಈಜುವಿಕೆಯಲ್ಲಿ ತುಂಬಾ ಜಾಣರು. ಆದರೆ ಈಜುವಿಕೆಯ ವೇಗ ಕಡಿಮೆ. ಸುಮಾರು ಪ್ರತೀ ಗಂಟೆಗೆ 12 ಮೈಲು ದೂರ ಈಜುತ್ತವೆ. ಆದರೆ ಇವುಗಳು ಈಜಲು ಮಾಡುವ ಡೈವ್ ನೋಡಲು ಕಣ್ಣುಗಳಿಗೆ ಹಬ್ಬ. 1000 ಫೀಟ್ ಮೇಲಿಂದ ಹಾರುವುದು ಇವುಗಳ ಸಾಮಾನ್ಯ ಸ್ವಭಾವ. 1772 ಫೀಟ್ ಮೇಲಿನಿಂದ ಸುಮಾರು 18 ನಿಮಿಷ ಗಾಳಿಯಲ್ಲೇ ಇದ್ದು, ಎಲ್ಲಕ್ಕಿಂತ ಮೇಲಿನಿಂದ ಡೈವ್ ಮಾಡಿದ ದಾಖಲೆ ಒಂದು ಪೆಂಗ್ವಿನ್ ಪಾಲಾಗಿದೆ. ಈ ಪೆಂಗ್ವಿನ್ ಎಂಪರರ್ ಜಾತಿಗೆ ಸೇರಿದ್ದಾಗಿದೆ ಹಾಗೂ ಇದು ತುಂಬಾ ಪ್ರತಿಭಾವಂತ ಜಾತಿ ಎಂದು ಕರೆಯಲಾಗುತ್ತವೆ.
ಪೆಂಗ್ವಿನ್‍ಗಳ ಗುಂಪನ್ನು ಕಾಲೋನಿ ಎನ್ನುತ್ತಾರೆ. ಒಂದು ಪ್ರದೇಶವು ಅತೀ ಹೆಚ್ಚು ತಂಪಾಗಿದ್ದರೆ ಆ ಪ್ರದೇಶಗಳಲ್ಲಿ ಈ ಪೆಂಗ್ವಿನ್‍ಗಳು ಅಧಿಕವಾಗಿ ಕಾಣಸಿಗುತ್ತದೆ. ಹೆಚ್ಚು ತಂಪು ಪ್ರದೇಶದಲ್ಲಿರುವ ಪೆಂಗ್ವಿನ್‍ಗಳ ಚರ್ಮದ ಕೆಳಗೆ ಕೊಬ್ಬು ಸಂಗ್ರಹವಾಗುತ್ತದೆ. ಅದೇ ಕೊಬ್ಬು ಅವುಗಳಿಗೆ ಶಾಖ ನೀಡುತ್ತವೆ. ಇದರ ಹೊರತು ಅದರ ರೆಕ್ಕೆಗಳು ಸೂರ್ಯನ ಶಾಖವನ್ನು ಸೋಸಿಕೊಂಡು ಇವುಗಳಿಗೆ ಶಾಖವನ್ನು ನೀಡುತ್ತವೆ. ಇವುಗಳು ಸುಮಾರು 15-20 ವರ್ಷಗಳ ಕಾಲ ಬಾಳುತ್ತವೆ.