ಇದು ನಮ್ಮ ಊರು: ತೆಲಂಗಾಣದ ಮೇಡಕ್ ಜಿಲ್ಲೆಯ ರಾಮಯಂಪೇಟೆ ಮಂಡಲದ ಧರ್ಮರಾಮ್ ಗ್ರಾಮದ ನಾಗಯ್ಯ ಮತ್ತು ಅಂಜಮ್ಮ ದಂಪತಿಗೆ ಒಬ್ಬನೇ ಮಗ. ಮಗನನ್ನು ಪ್ರೀತಿಯಿಂದ ಸಾಕಿದರು. ಆದರೆ ಮಗ ದೋಡವನಾದ ಮೇಲೆ ಹೆತ್ತವರನ್ನು ಮನೆಯಿಂದ ಹೊರ ಅಟ್ಟಿ ಹೆತ್ತವರು ಈ ಕೊರೋನಾ ಕಾಲದಲ್ಲಿ ಭಿಕ್ಷೆ ಬೇಡುವಂತಾಗಿದೆ. ದಂಪತಿಗಳು ಹೇಳುವಂತೆ ಮಗನ ಮದುವೆಗಿಂತ ಮುಂಚೆ ಎಲ್ಲವು ಸರಿಯಾಗಿತ್ತು. ಮಗನ ಮದುವೆಯ ನಂತರ ಮನೆಯಲ್ಲಿ ಜಗಳ ಪ್ರಾರಂಭವಾಯಿತು. ಸೊಸೆ ವೃದ್ಧ ದಂಪತಿಗಳೊಂದಿಗೆ ಆಸ್ತಿಯನ್ನು ಮಾರಾಟ ಮಾಡುವಂತೆ ಜಗಳವಾಡುತ್ತಿದ್ದಳು. ಒತ್ತಾಯಕ್ಕೆ ಬಲಿ ಬಿದ್ದು ನಾಗಯ್ಯ ಗ್ರಾಮದ ತನ್ನ ಮನೆಯನ್ನು ಮತ್ತು ಕೃಷಿಭೂಮಿಯನ್ನು ಮಾರಿ ಆ ಹಣದಿಂದ ಹೈದರಾಬಾದ್‌ನಲ್ಲಿ ತನ್ನ ಮಗನಿಗೆ ಮನೆ ಖರೀದಿಸಿದರು. ಆದರೆ ನಂತರ ಸೊಸೆ ವಯಸ್ಸಾದ ಈ ತಂದೆ ತಾಯಿಯನ್ನು ನಿರ್ಲಕ್ಷಿಸಲು ಪ್ರಾರಂಭಿದಳು. ಅವರಿಗೆ ಊಟ ತಿಂಡಿ ಕೂಡ ಕೊಡಲು ಆಕೆ ಒಪ್ಪಲಿಲ್ಲ. ಅವರಿರೊಂಗಿದೆ ಮಾತು ಆಡಲಿಲ್ಲ. ವಯಸ್ಸಾದ ದಂಪತಿಗಳು ತಮ್ಮ ಮಗ ಮತ್ತು ಸೊಸೆಯ ಜೊತೆ 15 ತಿಂಗಳು ಇದ್ದರು ಆದರೆ ಆ 15 ತಿಂಗಳಲ್ಲಿ ಮಗ ಮತ್ತು ಸೊಸೆ ವೃದ್ಧ ದಂಪತಿಗಳೊಂದಿಗೆ ಮಾತನಾಡಲಿಲ್ಲ.

ಕೊನೆಗೆ ಸೊಸೆ ಈ ವೃದ್ಧ ದಂಪತಿಗಳನ್ನು ಮನೆಯಿಂದ ಹೊಡೆದು ಓಡಿಸಿದ್ದಾಳೆ. ಓಡಿಸುವಾಗ ಮಗ ತಾಯಿಯ ಕೊರಳಲ್ಲಿದ್ದ ಮಂಗಳ ಸೂತ್ರವನ್ನು ಕಸಿದು ಕೊಂಡಿದ್ದಾನೆ. ಬಡ ದಂಪತಿಗಳು ನಗರದಿಂದ ತಮಮ್ ಗ್ರಾಮಕ್ಕೆ ಪ್ರಯಾಣಿಸಿದ್ದಾರೆ. ಆದರೆ ಗ್ರಾಮದ ಮನೆಯನ್ನು ಮಾರಿರುವ ಕಾರಣ ಅಲ್ಲಿ ಉಳಕೊಳ್ಳಲು ಜಾಗವಿಲ್ಲ. ಆನ್ ಆ ನಂತರ ರಸ್ತೆ ಬದಿಯಲ್ಲಿ ಆಶ್ರಯ ಪಡೆದರು. ಊಟ ತಿಂಡಿಗಾಗಿ ಭಿಕ್ಷೆ ಬೇಡುವಂತಾಯಿತು. ಇದೀಗ ದಂಪತಿಗಳ ದುಃಖದ ಕಥೆಯನ್ನು ಕೇಳಿದ ಗ್ರಾಮಸ್ಥರು ಅವರನ್ನು ರಾಮಾಯಂಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಮಗ ಮತ್ತು ಸೊಸೆಯ ವಿರುದ್ಧ ದೂರು ದಾಖಲಿಸಿದ್ದಾರೆ.

Leave a Reply