Karnataka Speaker KR Ramesh Kumar during an Assembly session on Friday. (PTI)

ವಿಧಾನಸಭೆ: ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುವರು ಹೊಟ್ಟೆಗೆ ಏನು ತಿನ್ನುತ್ತಾರೆ. ಅಂತವರು ತಮ್ಮ ಹಿನ್ನೆಲೆಯನ್ನು ನೋಡಿಕೊಳ್ಳಲಿ ಎಂದು ಸ್ಪೀಕರ್ ರಮೇಶ್ ಕುಮಾರ್ ಟೀಕಾಕಾರರಿಗೆ ತಿರುಗೇಟು ನೀಡಿರುವ ವಿಡಿಯೋ ತುಂಬಾ ವೈರಲ್ ಆಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಕೋರಿದ ಸಂದರ್ಭದಲ್ಲಿ ನಡೆದ ಶಾಸಕರ ಖರೀದಿ ಕುರಿತ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸ್ಪೀಕರ್ ಅಧಿವೇಶನವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದಾಗಿ ತಮ್ಮ ಬಗ್ಗೆ ಟೀಕೆ ಮಾಡಿದವರ ಪ್ರತಿಕ್ರಿಯೆಯಾಗಿ ಭಾವನಾತ್ಮಕವಾಗಿ ಹೇಳುತ್ತಿದ್ದರು.

ನನ್ನ ಮನೆಗೆ ಬಂದು ನೋಡಲಿ. ಒಂದು ಬೋರ್ಡ್ ಹಾಕಿಸಿಲ್ಲ. ನನ್ನ ಕಾರಿಗೆ ಬೋರ್ಡ್ ಹಾಕಿಸಿಲ್ಲ. ನೀವು ನಿಮ್ಮ ಸ್ವಾರ್ಥಕ್ಕಾಗಿ ಗೌರವವಾಗಿ ಬದುಕುವವರನ್ನು ಸಾಯಿಸಲು ಹೊರಟಿದ್ದೀರಲ್ಲ?.ಹೀಗೆ ಮಾಡಿದರೆ ಪ್ರಾಮಾಣಿಕವಾಗಿ ಇರೋರೆಲ್ಲ ಎಲ್ಲಿಗೆ ಹೋಗಬೇಕು. ಇನ್ನು ಬಿಚ್ಚಿ, ಹೊಟ್ಟೆಯಲ್ಲಿ ಇರೋದೆಲ್ಲ ಬಿಚ್ಚಿಡಿ. ಎಲ್ಲಾ ಹೊರಗೆ ಬರಲಿ, ಯಾರಾರು ಎಷ್ಟೆಷ್ಟು ಬೆತ್ತಲೆ ಆಗ್ತಾರೋ ಆಗಲಿ ಎಂದರು.

ಸಭೆಯ ಆರಂಭದಲ್ಲಿಯೇ ತಮ್ಮ ಬಗ್ಗೆ ಕೇಳಿ ಬರುತ್ತಿರುವ ಟೀಕೆಗೆ ಉತ್ತರಿಸಿದ ಸ್ಪೀಕರ್, ಪರೋಕ್ಷವಾಗಿ ಮತದಾನಕ್ಕೆ ನಾನು ವಿಳಂಬ ಮಾಡುತ್ತಿದ್ದೇನೆ. ಪಕ್ಷಪಾತ ಮಾಡುತ್ತಿದ್ದೇನೆ ಎಂಬ ಟೀಕೆ ಮಾಡುತ್ತಾರೆ. ಅಂತವರ ಬಗ್ಗೆ ನನಗೆ ಅನುಕಂಪ ಇದೆ. ಒಬ್ಬ ಮನುಷ್ಯನ ಚಾರಿತ್ರ್ಯವಧೆ ಬಹಳ ಸುಲಭ. ನನಗೆ ಪಕ್ಷಪಾತಿ ಆಗುವ ಸ್ಥಿತಿ ಬಂದಿಲ್ಲ. ಒಂದು ದಿನ ಕಲಾಪ ಮುಂದಕ್ಕೆ ಹಾಕುವುದರಲ್ಲಿ ನನ್ನ ಹಿತಾಸಕ್ತಿ ಏನೂ ಇಲ್ಲ. ನಾನು ಯಾರ ಒತ್ತಡಕ್ಕೂ ಕೆಲಸ ಮಾಡುವುದಿಲ್ಲ.  ನನ್ನ ಮೇಲೆ ಒತ್ತಡ ಹೇರುವ ಶಕ್ತಿ ಜಗತ್ತಿನಲ್ಲಿ ಇಲ್ಲ ಎಂದು ಸ್ಪೀಕರ್ ಸಾಂದರ್ಭಿಕವಾಗಿ ಹೇಳಿದರು.

LEAVE A REPLY

Please enter your comment!
Please enter your name here