ದಾಮೋಹ್: ಮಧ್ಯಪ್ರದೇಶದ ದಾಮೋಹ್ನಿಂದ ಗ್ರಾಮಸ್ಥರು ನದಿಯ ಮತ್ತು ಜಮೀನಿನ ಮೂಲಕ ಮಂಚದ ಮೇಲೆ ರೋಗಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಚಿಕಿತ್ಸೆಗಾಗಿ ರೋಗಿಯನ್ನು ರಸ್ತೆ ಸಂಪರ್ಕದ ಕೊರತೆಯಿಂದಾಗಿ ಮಂಚದ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಸಾಗಿಸುತ್ತಿರುವ ದೃಶ್ಯ ಮತ್ತೊಂದು ವಿಡಿಯೋ ಮಧ್ಯ ಪದೇಶ್ ನ ದಮೋಹಿನಿಂದ ಕಾಣಿಸಿಕೊಂಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಸ್ತೆ ಸಂಪರ್ಕದ ಕೊರತೆಯಿಂದಾಗಿ ಗ್ರಾಮಸ್ಥರು ಕಾಲ್ನಡಿಗೆಯಲ್ಲಿಯೇ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ANI ಬಿಡುಗಡೆ ಮಾಡಿದ ವೀಡಿಯೊದಲ್ಲಿ ಹಳ್ಳಿಗರು ಪ್ರವಾಹದ ನೀರಿನಲ್ಲಿಯೇ ನದಿ ದಾಟುವಿಕೆಯನ್ನು ಕಾಣಬಹುದು.

Leave a Reply