ಲಾಸ್ ಆಂಜಲೀಸ್: ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಅಪೂರ್ವ ಮದುವೆಯ ಫೋಟೊ ವೈರಲ್ ಆಗುತ್ತು.ಇದರಲ್ಲಿ ಮದುಮಗಳು ಗೋರಿಯೊಂದನ್ನು ಮದುವೆಯಾಗುತ್ತಿದ್ದಾಳೆ.

ಅಪಘಾತದಲ್ಲಿ ತೀರಿಕೊಂಡ ತನ್ನ ಭಾವೀ ಪತಿಯ ಗೋರಿಯನ್ನು ಮದುವೆಯಾಗಿರುವ ಚಿತ್ರಗಳಿವು.ಜೆಸಿಕಾಳ ಭಾವಿ ವರ ಒಂಬತ್ತು ತಿಂಗಳ ಹಿಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ. ನಂತರ ಜೆಸಿಕಾ ಒಂಟಿಯಾದಳು. ಆದರೆ ಮದುವೆಗೆ ನಿರ್ಧರಿಸಿದ ದಿನ ಹತ್ತಿರವಾಯಿತು.

ಆದರೆ ಜೆಸಿಕಾಳ ಭಾವೀ ವರ ಕೆಂಡಲ್ ಮರ್ಫಿ ಇರಲಿಲ್ಲ. ಆದರೆ ಆತನೊಂದಿಗೆ ಮದುವೆಗೆ ದಿನ ನಿಶ್ಚಯಿಸಿದಂದೇ ಮದುವೆಯಾಗುವ ನಿರ್ಧಾರಕ್ಕೆ ಜೆಸಿಕಾ ಬಂದಳು.

ಯಾಕೆಂದರೆ ಜೆಸಿಕಾ ಕೆಂಡಲ್‍ನನ್ನು ಅಷ್ಟು ಪ್ರೀತಿಸುತ್ತಿದ್ದಳು.ಆದರೆ ಕಳೆದ ವರ್ಷ ನಡೆದ ಅಪಘಾತದಲ್ಲಿ ಅವನು ಮೃತಪಟ್ಟನು. ಕೆಂಡಲ್ ತುಂಬ ಕರುಣೆಯ ಸ್ವಭಾವದ ಯುವಕನಾಗಿದ್ದ. ತುಂಬ ಪ್ರೀತಿಸುತ್ತಿದ್ದ ಮತ್ತು ದಯೆಯಿಂದ ವರ್ತಿಸುತ್ತಿದ್ದ. ಯಾರಿಗೂ ಬೇಕಾದರೂ ತನ್ನ ಉಡುಪನ್ನು ತೆಗೆದು ಕೊಡುತ್ತಿದ್ದ.

ಇಂಥ ವ್ಯಕ್ತಿಯನ್ನು ಕಳಕೊಂಡ ದುಃಖ ಜೆಸಿಕಾಳನ್ನುಕಾಡುತ್ತಿತ್ತು. ಆದ್ದರಿಂದ ಪೂರ್ವ ನಿಶ್ಚಿತ ಮದುವೆಯನ್ನು ರದ್ದು ಪಡಿಸಲು ಆಕೆ ಬಯಸಲಿಲ್ಲ. ಸೆಪ್ಟಂಬರ್ 29ರಂದು ಬಿಳಿಯ ಮದುಮಗಳ ಗೌನನ್ನು ತೊಟ್ಟಳು. ಆ ಉಡುಪು ಕೆಂಡಲ್ ಜೆಸಿಕಾಳಿಗೆ ಆಯ್ಕೆ ಮಾಡಿದ್ದ. ತನ್ನ ಖಾಸ ಸಂಬಂಧಿಕರಿಗೆ ಮತ್ತು ಗೆಳೆಯರಿಗೆ ಆಹ್ವಾನ ನೀಡಿ ಗೋರಿಯನ್ನು ಮದುವೆಯಾದಳು. ಅಮೆರಿಕದ ಇಂಡಿಯಾನದಲ್ಲಿ ಈ ಅಪೂರ್ವ ಮದುವೆಯು ನಡೆಯಿತು. ಅಲ್ಲಿ ಫೋಟೊಗ್ರಾಫರ್ ಕೂಡ ಇದ್ದರು. ಅವರು ಮದುವೆಯ ದೃಶ್ಯಗಳನ್ನು ಕ್ಲಿಕ್ಕಿಸುತ್ತಿದ್ದರು.

ನಾನು ಕೆಂಡಲ್ ಇಲ್ಲದಿದ್ದರೂ ನಾವು ಮದುವೆಯಾಗಲು ಬಯಸಿದ ಈ ದಿನವನ್ನು ಗಂಭೀರವಾಗಿ ಆಚರಿಸಲು ಬಯಸಿದೆ ಎಂದು ಜೆಸಿಕ ಹೇಳುತ್ತಾಳೆ. ಕೆಂಡಲ್ ಶಾರೀರಿಕವಾಗಿ ಇಲ್ಲದಿರಬಹುದು. ಆದರೆ ನೆನಪಿನಲ್ಲಿ ಅವನಿದ್ದಾನೆ. ಆದ್ದರಿಂದ ಫೋಟೊ ಶೂಟ್ ಮಾಡಿಸಿಕೊಳ್ಳ ಬಯಸಿದೆ ಎಂದು ಜೆಸಿಕಾ ಹೇಳುತ್ತಾಳೆ.

ಕೆಂಡಲ್ ಸಾವಿನ ಸುದ್ದಿಯ ಬೆನ್ನಿಗೆ ಅವಳ ಮದುವೆ ಉಡುಪು ತಯಾರಾದ ಸುದ್ದಿಯೂ ಬಂದಿತ್ತು. ಮೊದಲು ಜೆಸಿಕಾ ಆ ಉಡುಪನ್ನು ತೆಗೆದುಕೊಳ್ಳಲು ಬಯಸಲಿಲ್ಲ. ಆದರೆ ಮನೆಯವರು ಆ ಉಡುಪಿಗೆ ಬಹಳಷ್ಟು ಖರ್ಚು ಮಾಡಿದ್ರು. ನಂತರ ಉಡುಪನ್ನು ತರುವುದೆಂದು ನಿರ್ಧರಿಸಿದಳು. ನಂತರ ಅವಳಲ್ಲಿ ಫೋಟೊ ಶೂಟ್ ಐಡಿಯಾ ಹೊಳೆಯಿತು. ಫೋಟೊ ಶೂಟ್‍ನಲ್ಲಿ ಓರ್ವ ಯುವ ಮಹಿಳೆಯ ದುಃಖ , ಧೈರ್ಯ ಬಹಳ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

Leave a Reply