Representational Image

ವೈವಾಹಿಕ ಸಂಬಂಧ ಹುಡುಕಾಟದಲ್ಲಿರುವಾಗ ಸಿಲುಕುವ ಕೆಲವು ಗುಪ್ತ ವಂಚನೆಗಳನ್ನು ಸೂಚಿಸುತ್ತೇನೆ

1) ಒಂದನೆಯದಾಗಿ, ವಿವಾಹ ಸಮಾಲೋಚನೆ ವೇಳೆ ಬೇರೆ ಕೆಲಸಗಳಲ್ಲಿ ಮುಳುಗಿ ಮುಖ್ಯ ವಿಷಯಗಳನ್ನು ಗಮನಿಸಲು ಸಾಧ್ಯವಿಲ್ಲದಂತಾಗುವುದು. ವಿವಾಹದ ಸಿದ್ದತೆ, ಅದರ ಕಾರ್ಯಚಟುವಟಿಕೆ ಗಳು, ಪ್ರಯಾಣ, – ಆಮಂತ್ರಣ ಔತಣಗಳು, ವಿವಾಹ ಸಮಾಲೋಚ ನೆಯ ವೇಳೆ ಎರಡು ಕುಟುಂಬಗಳ ನಡುವೆ ಸಂಭವಿಸಿದ ಅಭಿಪ್ರಾಯ ವ್ಯತ್ಯಾಸಗಳ ಕುರಿತು ಚರ್ಚೆಗಳು. ಹೀಗೆ ಹಲವಾರು ನಿಬಿಡ ಕಾರ್ಯಗಳು, ಪರಸ್ಪರ ಹತ್ತಿರದಿಂದ ಅರಿತುಕೊಳ್ಳಲು ಸಾಧ್ಯವಾಗುವ ಸಂದರ್ಭಗಳು ಇವುಗಳಿಂದ ನಷ್ಟವಾಗುತ್ತವೆ.

2) ವಾಸ್ತವಿಕತೆ ಹಾಗೂ ಕೃತಕ ಮಾತುಗಳ ನಡುವೆ, ಬದುಕುವ ವಾಸ್ತವಿಕತೆಯೂ ಆಶಿಸುವ ಭ್ರಮಾಲೋಕದ ವ್ಯತ್ಯಾಸವನ್ನು ಅರಿತುಕೊಳ್ಳಲು ಸಾಧ್ಯವಾಗದಿರುವುದು. ವಿವಾಹಾಲೋಚನೆಗೆ ಬರುವ ವರಲ್ಲಿ ಹೆಚ್ಚಿನವರು ತಮ್ಮ ಅತ್ಯಂತ ಒಳ್ಳೆಯ ಸ್ವಭಾವ, ವರ್ತನೆ ಹಾಗೂ ಜೇನಿನ ರಸದಂತಹ ಮಾತುಗಳನ್ನು ಹೊರ ಹಾಕುತ್ತಾರೆ. ವಸ್ತ್ರಧಾರಣೆಯಲ್ಲೂ ಆ ಆಕರ್ಷಣೆ ವ್ಯಕ್ತವಾಗುತ್ತದೆ. ಆದರೆ ವಾಸ್ತವಿಕತೆ ಅದಕ್ಕೆ ವಿರುದ್ದವಾಗಿರುತ್ತದೆ.

3) ಸಾಮಾಜಿಕ ಜಾಲತಾಣ, ಸಹೋದ್ಯೋಗಿಗಳಾಗಿರುವುದು, ಕುಟುಂಬದ ನಡುವಿನ ಬಾಂಧವ್ಯ ಮೊದಲಾದ ಕಾರಣಗಳಿಂದ ವಿವಾಹಾಲೋಚನೆ ನಡೆಸುವ ಯುವಕ-ಯುವತಿಯರಲ್ಲಿ ಮೊದಲಿನ `ಹಳೆಯ ಪ್ರೇಮ’ ಕಾಣಿಸುತ್ತದೆ. ಆ ಸಂದರ್ಭದಲ್ಲಿ ಈರ್ವರಿಗೂ ತಮ್ಮ ದೌರ್ಬಲ್ಯಗಳು, ಸಮಸ್ಯೆಗಳನ್ನು ಅರಿತುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಏಕೆಂದರೆ `ಪ್ರೇಮ ಕುರುಡು’ ಎಂದು ಹೇಳಲಾಗುತ್ತದೆಯಲ್ಲವೇ? ಪರಸ್ಪರ ವಾಸ್ತವಿಕತೆಯನ್ನು ಗ್ರಹಿಸಲು ಈರ್ವರಿಗೂ ಕುರುಡು ಪ್ರೇಮ ತಡೆಯಾಗಿರುತ್ತದೆ. ಒಂದು ಘಟನೆ ನೆನಪಿಸುತ್ತೇನೆ: ಓರ್ವ ಯುವತಿಯು ವಿವಾಹ ಸಮಾಲೋಚನೆಗಾಗಿ ಬಂದ ಪುರುಷನನ್ನು ಬಹಳ ಪ್ರೀತಿಸಿದಳು. ವಿವಾಹದ ಮಾತುಕತೆ ನಡೆಯುತ್ತಿರುವ ಸಮಯದಲ್ಲೇ ರಾತ್ರಿ ಯುವತಿಯೊಂದಿಗೆ ಆಗ ದೀರ್ಘ ಹೊತ್ತು ಫೋನ್‌ನಲ್ಲಿ ಮಾತನಾಡುತ್ತಿದ್ದ. ಆತನ ನಾಲಗೆ ಸರಿಯಾಗಿ ಹೊರಳದಿರುವುದರಿಂದ ಮಾತಿನಲ್ಲಿ ಅಸ್ಪಷ್ಟತೆಯಿರುವುದು ಅವಳಿಗೆ ಕಂಡುಬಂದಿತ್ತು. ಆಕೆ ಹೇಳುತ್ತಾಳೆ, “ಅಂದು ಅವರನ್ನು ಅರ್ಥಮಾಡಿಕೊಳ್ಳಲು ನನ್ನ ಕುರುಡು ಪ್ರೇಮ ಅಡ್ಡಿಯಾಯಿತು. ಆತ ಎಲ್ಲಾ ರಾತ್ರಿಯೂ, ಮದ್ಯಪಾನ ಮಾಡಿ ಬರುತ್ತಾನೆ. ಈ ವಿಷಯ ಮದುವೆಯ ಬಳಿಕವೇ ಅರ್ಥವಾಯಿತು.

4) ವಿವಾಹದಲ್ಲಿ ಹಿರಿಯ ವ್ಯಕ್ತಿಯ ಕೆಲವು ತಪ್ಪಾದ ತೀರ್ಮಾನಗಳು ದಾಂಪತ್ಯ ವಿರಸಕ್ಕೆ ಕಾರಣವಾಗುವುದಿದೆ. ಆತ ಮನದಲ್ಲಿ ತಾನೇ ಸ್ವತಃ ನಿರ್ಧಾರ ತಾಳುವುದು. ಉದಾಹರಣೆಗೆ, ಕೆಲವು ಹುಡಿಗಿಯರ ಆಗಿನ ಉತ್ತಮ ಸ್ವಭಾವಕ್ಕಾಗಿ ಗುಣನಡತೆಯಿರುವ ಹುಡುಗಿಯೆಂದು ತೀರ್ಮಾನಿಸುವುದು. ಯುವಕ ಹೆತ್ತವರೊಂದಿಗೆ ಉತ್ತಮವಾಗಿ ವರ್ತಿಸುವುದನ್ನು ನೋಡಿದರೆ ಇವನು ಯಾವಾಗಲೂ ಹೆತ್ತವರನ್ನು ಗೌರವಿಸುತ್ತಾನೆ ಎಂದು ಭಾವಿಸುವುದು. ಕುಟುಂಬವು ಧಾರ್ಮಿಕ ಒಲವುಳ್ಳದ್ದಾದರೆ ಆ ಯುವಕ-ಯುವತಿಯೂ ಒಳ್ಳೆಯ ಸಂಸ್ಕಾರವಂತರೆಂದು ತಿಳಿಯುವುದು. ಇವೆಲ್ಲಾ ಸರಿಯಾಗಿರಬೇಕಾಗಿಲ್ಲ. ಸರಿಯಾದ ವಿಷಯವನ್ನು ತಿಳಿದು, ಅರ್ಥಮಾಡಿಕೊಂಡು ಇಂತಹ ಪರಿಸ್ಥಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು.

5) ವಿವಾಹ ಮಾತುಕತೆಯ ವೇಳೆಯಲ್ಲೇ ಯುವಕ-ಯುವತಿಯರ ಅಭಿಪ್ರಾಯಗಳಲ್ಲಿ ಅಂತರ ಹಾಗೂ ಅಭಿರುಚಿ ಗಳಲ್ಲಿ ವ್ಯತ್ಯಾಸವು ಅನುಭವಕ್ಕೆ ಬರುತ್ತದೆ. ಆದರೆ ಅದನ್ನು ದೊಡ್ಡ ವಿಷಯದಂತೆ ತೆಗೆದುಕೊಳ್ಳುವುದಿಲ್ಲ. ವಿವಾಹದ ಬಳಿಕ ಎಲ್ಲಾ ಸರಿಯಾಗುತ್ತದೆಯೆಂಬ ಶುಭ ನಿರೀಕ್ಷೆ ಅವರಲ್ಲಿರುತ್ತದೆ. ಇದು ಅತ್ಯಂತ ಸಣ್ಣ ವಿಚಾರವೆಂಬ ಭಾವನೆ. ಆದರೆ ನಂತರ ಅದುವೇ ದೊಡ್ಡ ಸಮಸ್ಯೆಯಾಗುವ ಸಾಧ್ಯತೆಯಿರುವುದರಿಂದ ಮೊದಲೇ ಸ್ಪಷ್ಟವಾದ ತೀರ್ಮಾನ ಅಗತ್ಯವಾಗಿದೆ.

6) ವಿವಾಹದ ಬಳಿಕ ಸಂಗಾತಿಯನ್ನು ತನ್ನ ಇಚ್ಛೆಯಂತೆ ಬದಲಿಸಬಹುದೆಂಬ ನಿರೀಕ್ಷೆ ಎಲ್ಲರಲ್ಲೂ ಇರುತ್ತದೆ. ಆದರೆ ಇದು ಸರಿಯಲ್ಲ. ವಿಶೇಷವಾಗಿ ಧಾರ್ಮಿಕ ವ್ಯವಹಾರ ಹಾಗೂ ಸಂಸ್ಕಾರದ ವಿಷಯಗಳು. ತಂಬಾಕು ಸೇವನೆ, ಕೆಟ್ಟವರ ಗೆಳೆತನ, ಮೊದಲಾದ ವಿಷಯಗಳಲ್ಲಿ ಬದಲಾವಣೆ ತರಲು ಸಾಧ್ಯವಾಗುವುದೆಂಬ ನಿರೀಕ್ಷೆಯು ಸರಿಯಲ್ಲ.

7) ಸಂಗಾತಿಯಾಗುವವಳ ಕುರಿತು ಬೆಟ್ಟದಷ್ಟು ನಿರೀಕ್ಷೆ, ಭರವಸೆ ಇರಿಸುವುದು, ತನ್ನೆಲ್ಲಾ ಬಯಕೆಗಳು, ಕನಸುಗಳು ನೂರು ಶೇಕಡಾ ಈಡೇರುತ್ತದೆಂಬ ವ್ಯರ್ಥ ನಿರೀಕ್ಷೆಯಲ್ಲಿ ಅವರು ಇರುತ್ತಾರೆ. ತಮ್ಮ ನಿರೀಕ್ಷೆಗಳು ಹುಸಿಯಾಗುವಾಗ ದಾಂಪತ್ಯದಲ್ಲಿ ಬಿರುಕು ಗೋಚರಿಸುತ್ತದೆ.

8) ಎರಡು ಕುಟುಂಬದ ನಡುವಿನ ರಹಸ್ಯಗಳು ಹಾಗೂ ಇಬ್ಬರ ಪೋಟೋಗಳು ಪರಸ್ಪರ ವಿನಿಮಯ ಮಾಡಿಕೊಳ್ಳುವುದು. ಇದು ಭವಿಷ್ಯದಲ್ಲಿ ದುರುಪಯೋಗವಾಗುವ ಸಾಧ್ಯತೆ ಅಧಿಕವಿದೆ.

Leave a Reply