ಮುಂಬಯಿ: ಎರಡು ಬಾರಿ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡನ್ನು ಮುನ್ನಡೆಸಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರವೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ ಎಂದು ಮುಖ್ಯ ಕೋಚ್ ರವಿಶಾಸ್ತಿ ಬಹಿರಂಗಪಡಿಸಿದ್ದಾರೆ.

ಎಂಎಸ್‌ ಅವರೊಂದಿಗೆ ನಾನು ಮಾತನಾಡಿದ್ದೇನೆ. ಇದು ನಮ್ಮ ಇಬ್ಬರ ನಡುವೆ ನಡೆದ ಮಾತುಕತೆ. ಅವರು ತಮ್ಮ ಟೆಸ್ಟ್ ಕ್ರಿಕೆಟನ್ನು ಪೂರ್ಣಗೊಳಿಸಿದ್ದಾರೆ. ಶೀಘ್ರವೇ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಶಾಸ್ತ್ರಿ ಖಾಸಗಿ ವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅವರು ಕ್ರಿಕೆಟ್‌ನ ಎಲ್ಲ ಪ್ರಕಾರಗಳಲ್ಲಿ ಸತತವಾಗಿ ಆಡಿದ್ದಾರೆ. ಜನರು ಅವರ ನಿರ್ಧಾರವನ್ನು ಗೌರವಿಸಬೇಕು ಎಂದರು. ಈ ವಯಸ್ಸಿನಲ್ಲಿ ಅವರು ಕೇವಲ ಟಿ-20 ಪಂದ್ಯಗಳನ್ನು ಮಾತ್ರ ಆಡಬಲ್ಲರು. ಐಪಿಎಲ್ ನಲ್ಲೂ ಆಡುವರು ಎಂದು ಶಾಸ್ತ್ರಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here